Organised by 14th Batch
ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಮೈನಹಳ್ಳಿಯಲ್ಲಿ ಬೆಟಗೇರಿ ಕ್ಲಸ್ಟರ್ ಮಟ್ಟದ ಅಂಕುರ ಅಸೋಸಿಯೇಶನ್ ಜವಾಹರ ನವೋದಯ ವಿದ್ಯಾಲಯ ಕುಕನೂರು ತಾ:ಕುಕನೂರು ಜಿ: ಕೊಪ್ಪಳ ಪ್ರವೇಶಾತಿ ಪರೀಕ್ಷೆ ಕುರಿತು ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶಂಭುಲಿಂಗನಗೌಡ ಪಾಟೀಲ್ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಜವಾಹರ ನವೋದಯ ವಿದ್ಯಾಲಯ ಕುಕನೂರಿನ ಪ್ರಾಂಶುಪಾಲರಾದ ಶ್ರೀಮತಿ ಜಯಾ ರವರು, ಅತಿಥಿಗಳಾಗಿ ಜವಾಹರ ನವೋದಯ ವಿದ್ಯಾಲಯದ ಶಿಕ್ಷಕರು ಹಾಗು ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಭಾಗವಹಿಸಿದ್ದರು.ಬೆಟಗೇರಿ ಕ್ಲಸ್ಟರನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ R.B ರವರು ಪ್ರಾಸ್ತಾವಿಕ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ನೀಡುವ ಮಾಹಿತಿಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಸಿಗುತ್ತದೆ,ನಾನು ಕೂಡ ನವೋದಯ ವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದೆ ಎಂದು ತಾವು ಕಲಿತ ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಜಯಾ ರವರು ಮಾತನಾಡಿ ನವೋದಯದ ವಿದ್ಯಾಲಯದಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ , ನಮ್ಮಲ್ಲಿ ಅಭ್ಯಾಸಿಸಿದ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿದ್ದಾರೆ ಅದೇ ತರಹ ನೀವು ಅಭ್ಯಸಿಸಬೇಕು ಎಂದರು.ಹಳೆಯ ವಿದ್ಯಾರ್ಥಿಗಳಾದ ಶ್ರೀ ಶರಣಪ್ಪ ನಾಯಕರ ಹಾಗು ವೀರಯ್ಯಗಂಧದ ರವರು ಮಾತನಾಡಿ ತಾವು ಕಲಿತ ಹಳೆಯ ಅನುಭವಗಳನ್ನು ವಿದ್ಯಾಲಯದಲ್ಲಿ ಸಿಗುವ ಸೌಲಭ್ಯಗಳ ಕುರಿತು ಹಾಗೂ ಪ್ರವೇಶಾತಿ ಪರೀಕ್ಷೆಯ ತಯಾರಿಗಾಗಿ ಮಕ್ಕಳಿಗೆ ಜಾಗೃತಿ ಮೂಡಿಸಿದರು. ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀ ಶಂಭುಲಿಂಗನಗೌಡ ಪಾಟೀಲ್ ಅವರು ನಮ್ಮಲ್ಲಿ ಕೂಡ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳಿವೆ ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಂಡು ಮುಂದಿನ ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳಬೇಕು,ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ವಿಭಾಗದಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿವೆ ಆದ್ದರಿಂದ ತಾವುಗಳು ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು. ಈ ಕಾರ್ಯಕ್ರಮದಲ್ಲಿ ನೆರೆ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಗವಿ ಕುಮಾರ್ ಕಸ್ತೂರಿ, ಹಿರಿಯ ಶಿಕ್ಷಕರಾದ ಶ್ರೀ ವೀರಣ್ಣ ಕೋನ ಸಾಗರ್, ಶ್ರೀ ಪ್ರಕಾಶ್ ತಟ್ಟಿ , ಕುಮಾರ ಶಿಲ್ಪಾ , ಶ್ರೀ ಸಣ್ಣ ಹನುಮಪ್ಪ ಮೇವುಂಡಿ , ಬಿಕ್ಕನಹಳ್ಳಿ ಹಾಗೂ ಬಿಸರಳ್ಳಿ ಗ್ರಾಮದಲ್ಲಿ ಅಭ್ಯಾಸಸುತ್ತಿರುವ 5ನೇ ತರಗತಿಯ ಮುದ್ದು ವಿದ್ಯಾರ್ಥಿಗಳು ಹಾಜರಿದ್ದರು.
14th Batch
Alumni meet 2023 was conducted on 16th & 17th December 2023 in JNVK Campus. As 13th batch completed 25 years of joining the school, the Alumni meet was organized by 13th Batch.
Here are some of the pictures from Alumni meet - Pictures
Organised by 23rd Batch in association with SELCO
Alumni meet 2022 was conducted on 10th December 2022 in JNVK Campus. As 12th batch completed 25 years of joining the school, the Alumni meet was organized by 12th Batch. The event was very grand as 12th batch also organized Guru Vandana Program to honour all our Teachers who taught them during JNV Days.
Here are some of the pictures from Alumni meet - Pictures
The event was also recorded in detail. Here is a link to the Video recordings - Videos
Organised by 17th Batch
By - 8th Batch
Organised by 17th Batch