By - Lt Cdr Naveenkumar R Kolli (Retd), Batch 7 (1992-97)
One common thing we hear among the public these days is “Navodayas are not the same any more”. Has the quality of Navodaya Vidyalayas really declined? Not so, in my opinion, Navodayas have remained where they were twenty years ago while the outside world has moved on. The beacon of Navodaya Vidyalayas may look dim in the glitter of sprawling Corporate Schools, International Schools (so called), Convents, Private Schools and Coaching Centres that promise to make everyone a Doctor, IITian or CEO.
Should the Navodayas compete with the schools of the outside World? Not really, Navodaya Vidyalayas remain a class apart from the rest of the schools. What they really need to do is to work upon their strengths and build on the strong foundation.
Excessive focus on academics and professional courses after 12th standard has become an impediment in full potential of JNVs. Navodayas can and should be the powerhouses spinning off future Champions, sincere and efficient civil servants, compassionate social workers, entrepreneurs, honest politicians and successful professionals driven by values in every field.
The pedestal for future Champions: Navodayas across the country are blessed with large campuses. We must create centres of excellence in sports in each region and children from other schools in the region pursuing sports can be migrated to these schools. Professional coaches need to be hired to train these children and passionate senior physical education teachers can be appointed to oversee these centres. This way, motivated and able young boys and girls from rural areas can be nurtured into future champions of India
Professional with values: Every Navodayan is hand picked from the best at a young age, undergoes quality education and is bound to do well in the chosen profession. The Navodaya alumni are already making their mark in every profession be it as Doctors, Engineers, Farmers, Soldiers, Management professionals, Scientists, artists, creative professionals etc.. Navodaya Vidyalayas must focus on cultivating values into young minds so that they grow up as professionals with values and be the builders of a vibrant nation.
The incubator of future leaders: When compared to the larger society, Navodayans generally are seen to be empathetic and have higher moral values. Navodaya Vidyalayus must build upon this. Impetus must be given to co-scholastic activities aimed at inculcating leadership skills among our students right from a young age. Our country needs sincere, efficient public servants and honest politicians to lead us into becoming a strong nation.
Compassionate social workers: The Vidyalays provide an environment of brotherhood and fraternity where students grow without the differences of caste, creed or religion. Orienting and training children with a social bent of mind would prepare them to be the future social workers and social entrepreneurs making an impact in the society.
Creating value through Entrepreneurship: Entrepreneurs are the engines of growth of a nation. Rather than focussing only on professional courses, Navodaya Vidyalayas also need to work on creating young men and women who leave the Vidyalaya with an entrepreneurial mindset and be the wealth creators of the future.
The immediate need: The immediate need is to carry out major repairs of old buildings that are in dilapidated condition. A quick audit of all buildings older than 25 years needs to be carried out and a centralised contract must be given to reputed, reliable contractors to complete repairs in a time bound manner.
While other institutions are focussed on churning out professionals, let Navodaya Vidyalayas produce the true nation builders. In this Amrit kaal, Navodaya Vidyalas can be the contributors in the journey of our nation to be the Vishwaguru. Hum hi Navoday ho…
‘ಮೂಷಿಕ ವಾಹನ ಮೋದಕ ಹಸ್ತ’ ಅಂತ ಹಾಡ್ ಬಂದಾಗೇ ಎಚ್ಚರ ಆಗೋದು. ಒಂದೊಂದ್ ಸಲ ಅದು ಕನಸೇನೂ ಅನ್ಸೋದು ಆದ್ರೆ ಅದರ ಜೊತಿಗೆ ಪಿಇಟಿ ಸರ್ ವಿಸಿಲ್ ಬಂತು ಅಂದ್ರೆ ಸಾಕು, ಧಡ್ ಧಡ್ ಧಡ್ ಧಡ್ ಅಂತ ಓಡೋದೇ ಎಲ್ಲಾರು. ಕೆಲ್ವೊಬ್ಬರಂತೂ ಅರ್ಧ ಗಂಟೆ ಮೊದಲೇ ಎದ್ದು ಹಲ್ಲು ಉಜ್ಜಿ ರೆಡಿ ಆಗಿರೋರು. ಅದೆಂಗೆ ಟೈಮ್ ಸಿಗ್ತಿತ್ತೋ. ರಾತ್ರಿ ಮಲ್ಕೊಳಕ್ಕಿಂತ ಮೊದ್ಲು ಎಲ್ಲಾರ್ದೂ ಒಂದೇ ವಿಶ್ ಇರೋದು. ಪಿಇಟಿ ಸರ್ ಗೆ ಹುಷಾರ್ ಇರಲಾರದಂಗ ಆಗ್ಲಿ, ಲೇಟ್ ಆಗಿ ಏಳಲಿ ಅಂತ. ಏಳು ವರ್ಷದಾಗ ಬೇರೆ ಏನಾದ್ರು ಆಗಿರ್ಬೋದು ಬಟ್ ಇದಂತೂ ಆಗಿಲ್ಲ. ಮುಂಜಾನೆ ನಾಲ್ಕು ನಲ್ವತ್ತೈದು ಆಯ್ತಂದ್ರೆ ವಿಸಲ್ ಶುರು. ಎಷ್ಟೊಂದ್ ಸರ್ತಿ ಸರ್ ಮೂಡ್ ಸರಿ ಇರ್ಲಿಲ್ಲ ಅಂದ್ರೆ ಹೌಸ್ ಒಳಗ್ ಬಂದು ಸಿಕ್ಕೋರಿಗೆಲ್ಲ ರಪ್ ರಪ್ ಅಂತ ಬಾರಿಸ್ತಿದ್ರು. ಚಳಿಗಾಲದಾಗಂತೂ ಏಟು ಬಿದ್ರೆ ಅಟ್ ಲೀಸ್ಟ್ ಮೂರ್ ಟಾಸ್ ಇರ್ತಿತ್ತು ನೋವು. ಒಳಗ್ ಬಂದ್ರಂತ ಗೊತ್ತಾಗೋದೇ ತಡ ಎಷ್ಟೊಂದ್ ಜನ ಕಿಡಕಿ ನ್ಯಾಗ್ ಆಗಿರೋ ಗ್ಯಾಪ್ ನ್ಯಾಗೆ ಹಾರ್ಕೊಂಡ್ ಬಿಡೋರು. ನೀರಿನ ಟ್ಯಾಂಕಿಗೆ ಓಡಿಹೋಗಿ ಬಾಯಿ ಮುಕ್ಕಳಿಸ್ಕೊಂಡು ಗ್ರೌಂಡ್ ಗೆ ಒಡೋರು.
ಬಂಡಿ ಇಂದ ಹಾಡ್ ಅಂತೂ ಹಂಗೆ ಬರ್ತಿರತಿತ್ತು. ಅದರ ಜೊತಿಗೆ ಗಾಂಧಿ ಕಂಪನಿ ಕ್ವಾರಿ ನು ಸ್ಟಾರ್ಟ್ ಆಗಿದ್ರೆ ಮುಗಿತು, ಬಾಜು ಇರೋರೋ ಮಾತಾಡೋದು ಕೇಳಿಸ್ತಿರ್ಲಿಲ್ಲ.
ಅಟೆಂಡೆನ್ಸ್ ಟೈಮ್ ನ್ಯಾಗ್ ಯಾರಾದ್ರೂ ಬಂದಿಲ್ಲ ಅಂತ ಸರ್ ಗೆ ಗೊತ್ತಾದ್ರೆ ಅವ್ರ ಪೆಟ್ ದಾಂಡಿಗರನ್ನ ಕಳ್ಸಿ ಎಳ್ಕೊಂಡ್ ಬರಾಕ್ ಹೇಳತಿದ್ರು . ಹಂಗ ಸಿಗೆ ಬಿದ್ದವ್ರ್ದೆಲ್ಲಾ ಏನ್ ಕೇಳ್ತೀರಿ ಕಥಿ. ಬ್ರಷ್ ಮಾಡ್ಕೊಂಡ್ ಬಾರ್ಲಾರ್ದವೃದೂ ಅದೇ ಕಥಿ, ಎಕ್ಸ್ಟ್ರಾ ಸ್ಪೆಷಲ್ ಏಟು. ಎಲ್ಲ ಚೆಕಿಂಗ್ ಮುಗುದ್ ಮ್ಯಾಲೆ ರನ್ನಿಂಗ್ ಸ್ಟಾರ್ಟ್.
ದಿನ ಚೊಲೋ ಇತ್ತಂದ್ರೆ ಓಡೋದಿಕ್ಕೆ ಕುಕ್ನೂರ್ ತನಕ ಕರ್ಕೊಂಡ್ ಹೋಗೋರು. ಅದೇ ನಮಗ ಖುಷಿ ಏನೋ ಕ್ಯಾಂಪಸ್ ಇಂದ ಹೊರಗ್ ಹೋಗಿವ್ಯಲ್ಲ ಅಂತ. ವಾಪಸ್ ಬಂದ್ ಮ್ಯಾಲೆ ಯುಶುಅಲ್ ಗ್ರೌಂಡ್ ಕಿಂತ ಬ್ಯಾಸ್ಕೆಟ್ಬಾಲ್ ಕೋರ್ಟ್ ನ್ಯಾಗ ಎಕ್ಸರ್ಸೈಜ್ ಮಾಡೋದು ಏನೋ ಮಜಾ.
ದಿನ ಸರಿ ಇರ್ಲಿಲ್ಲ ಅಂದ್ರ ಅಲ್ಲೇ ಗ್ರೌಂಡ್ ನ್ಯಾಗ ಒಂದು ಹತ್ತು ರೌಂಡ್ ಓಡ್ಸಿ ಅಲ್ಲೇ ಎಕ್ಸರ್ಸೈಜ್ ಮಾಡ್ಸಿ ಕಳ್ಸೋರು.
ದಿನ ಇನ್ನೂ ಖರಾಬ್ ಇತ್ತಂದ್ರ ಯೋಗ. ಯೋಗ mp ಹಾಲ್ ನ್ಯಾಗ್ ಇದ್ರೆ ಉಳ್ಕೊಂಡ್ವಿ. ಬೆಚ್ಚಗಿರೋದು, ಶವಾಸನ ಬಂದಾಗ ಬೆಚ್ಚಗ ಮಲ್ಗಬೋದಿತ್ತು. ಆದ್ರೆ ಹೊರಗ್ ಏನಾದ್ರು ಇದ್ರೆ ಆ ಚಳಿಗೆ ಸತ್ತೇ ಹೋಗ್ತಿವೇನೋ ಅನ್ಸ್ತಿತ್ತು. ಅದೂ ಅಲ್ದೆ ಯೋಗಕ್ಕ ಉಪಯೋಗಿಸಿರೋ ಬೆಡ್ಶೀಟ್ ನ ಬ್ಯಾರೆ ಒಗಿಬೇಕು. :-(. ಸ್ಪೋರ್ಟ್ಸ್ ಟೀಮ್ ನ್ಯಾಗ್ ಇರೋವ್ರದೇ ಲಕ್ಕು. ಜಾಗಿಂಗ್ ಟೈಮ್ ನ್ಯಾಗು ಆಟ ಆಡ್ಲಿಕ್ ಹೋಗೋರು. ಬೇರೆವರಿಗೆಲ್ಲಾ ಉರ್ಸ್ಕೊತ. ಇನ್ನ ಕೈ ಕಾಲ್ ಬ್ಯಾನಿ ಅಂತ ಆರಾಮ್ ಗ್ರೌಂಡ್ ತುಂಬಾ ವಾಕ್ ಮಾಡೋರ್ನ ನೊಡಿದ್ರಂತೂ ಎಲ್ಲಕಡೆ ಇಂದ ಬೆಂಕಿ ಬರೋದು.
ಹಂಗು ಹಿಂಗು ಜಾಗಿಂಗ್ ಮುಗಿತು ಅನ್ನೋದ್ರಾಗೆ ರೆಡಿ ಆಗಿ ಅಸ್ಸೆಂಬಲಿಗೆ ಹೋಗೋ ಟೆನ್ಶನ್. ನಂಬರ್ ೨ ಗೆ ಹೋಗೋದೇ ಒಂದು ದೊಡ್ಡ ಚಾಲೆಂಜ್. ಭಾರಿ ಹುಷಾರಿರೋರು ಏನು ಮಾಡಿ ರಾತ್ರಿ ನೇ ಒಂದು ಜಗ್ ಇಲ್ಲ ಬಾಟ್ಲಿ ಬಚ್ಚಿಟ್ಟಿರೋರೋ ಟೆನ್ಶನ್ ಇಲ್ಲಾರ್ದೆ ಕೆಲಸ ಮುಗುಸ್ಕೊಂಡ್ ಬರೋರು. ಉಳ್ದವ್ರು ಲೈನ್ ನ್ಯಾಗ ಕಾಯ್ಕೋತ ನಿಲ್ಲೋರು ವಾಪಸ್ ಬರೋರ್ ಹತ್ರ ಇಸ್ಕೊಲಿಕ್ಕೆ. ಇನ್ನು ಸ್ವಲ್ಪ ಕ್ಲೋಸ್ ಇರೋರು ಯಾವದಾದ್ರು ಬಕೆಟ್ ಸಿಕ್ರೆ ಸಾಕು, ಒಂದರಾಗೆ ೪-೫ ಜನ ಅಡ್ಜಸ್ಟ್ ಮಾಡ್ಕೊಂಡ್ ಹೋಗೋರು. ಅಲ್ಲಿ ಒಬ್ರುದಾದ್ ಮೇಲೆ ಇನ್ನೊಬ್ರಿಗೆ ಪಾಸ್ ಮಾಡಿ ಕೆಲಸ ಮುಗುಸ್ಕೊಂಡ್ ಬರೋರು.
ಯಾರಿಗೆ ಚೊಂಬು ಕೊಡ್ತೀವಿ ಅಂತ ಎಷ್ಟು ನೆನಪಿಟ್ಕೋತಾ ಇದ್ವಿ ಅಂದ್ರೆ, ನಮ್ಮ ಸೈಲ್ಲಬಸ್ ನು ಅಷ್ಟ ನೆನ್ಪಿರ್ತಿರಲಿಲ್ಲ. ಇಲ್ಲಾಂದ್ರೆ ನಾಳೆಗೆ ಮತ್ತೆ ಕಷ್ಟ ಆಗೋದು. ಒಬ್ಬೊಬ್ಬರಂತೂ ತಂಬಿಗೆ ಬಕೆಟ್ ಮ್ಯಾಲೆ ಹೆಸ್ರೇ ಬರೆಯೋರು.
ನಂಬರ್ ೨ ಆದ್ಮ್ಯಾಲೆ ಸ್ನಾನದ್ದೇ ಒಂದು ದೊಡ್ಡ ಸರ್ಕಸ್. ಮಳೆಗಾಲದಾಗ ನೀರಿಂದ ಏನು ಪ್ರಾಬ್ಲಮ್ ಆಗ್ತಿರ್ಲಿಲ್ಲ. ಆದ್ರೆ ಬ್ಯಾಸಿಗಿ ಕಾಲ್ದಗಂತೂ ಫಜೀತಿ ನೇ. ಎಷ್ಟೋ ಸಲ ನೀರ್ ಇರಲಾರ್ದೆ ಕಾಂಪೌಂಡ್ ಹೊರಗಿರೋ ಬೋರ್ ಗೋ ಇಲ್ಲ ಅಲ್ಲೂ ನೀರ್ ಇರಲಾರ್ದೆ ಇನ್ನು ಸ್ವಲ್ಪ ಇರೋ ಬಂಡಿ ಗೋ ಹೋಗ್ಬೇಕಾಗ್ತಿತ್ತು. ಆ ಚಳಿ ನ್ಯಾಗ ಅದೆಂಗೆ ತಣ್ಣೀರು ಸ್ನಾನ ಮಾಡುತಿದ್ವೋ ಗೊತ್ತಿಲ್ಲ. ಸ್ಕೂಲ್ ನ್ಯಾಗ್ ಕೊಡೊ palmolive ಇಲ್ಲ ಲಕ್ಸ್ ಸೋಪ್ ಹಚ್ಕೊಂಡ್ರೆ ಚಳಿಗಾಲದಾಗಂತೂ ಎಲ್ಲಾರ್ದೂ ಭೂತದ ಮುಖಾನೇ.
ಕೆಲವೊಬ್ಬ ಮಹಾಶಯರಂತೂ ರಾತ್ರಿ ನೇ ಸ್ನಾನ ಮಾಡಿ ಸ್ಕೂಲ್ ಡ್ರೆಸ್ ಹಾಕ್ಕೊಂಡ್ ಮಲಗಿ ಮುಂಜಾನೆ ಬರಿ ಮಾರಿ ತೊಳುಕೊಂಡು ರೆಡಿ ಆಗಿಬಿಡೋರು.
ಸ್ನಾನ ಆದಕೂಡ್ಲೆ ವೈಟ್ ಶರ್ಟ್ ಗ್ರೇಯ್ ಪ್ಯಾಂಟ್ ಹಾಕ್ಕೊಂಡು ಬ್ಲಾಕ್ ಶೂ ಫುಲ್ ಪೋಲಿಷ್ ಮಾಡಿ ಹಾಕೊಂಡು ಸ್ಕೂಲ್ ಕಡೆ ಹೋಗೋದು. ಅಷ್ಟ್ರಾಗೆ ಪಿಇಟಿ ಸರ್ ಮನ್ಯಾಗ ಛಾ ಕುಡುದ್ ಇನ್ನೊಂದ್ ರೌಂಡ್ ಹುಡುಗುರ್ನ ಹೊಡಿಯೋದಕ್ಕ ಬರೋರು.
೭ ಗಂಟಿಗೆ ಅಸ್ಸೆಂಬಲಿ ಶುರು. ಎಲ್ಲರು ಕ್ಲಾಸ್ ವೈಸ್, ಹೈಟ್ ವೈಸ್ ಲೈನ್ ನ್ಯಾಗ್ ನಿಲ್ಲೋರು. ಡಾಸ್(DOS) ಪೇಶಂಟ್ಸ್ ಅಸ್ಸೆಂಬಲಿ ತಪ್ಪುಸ್ಕೊಂಡು ಪ್ರಿನ್ಸಿಪಾಲ ರೂಮ್ ಮುಂದೋ ಇಲ್ಲ ಕ್ಲಾಸ್ ನ್ಯಾಗೂ ಕೂತು ಮಜಾ ಮಾಡೋರು.
ಲೇಜಿ ಇರೋರು ಇಲ್ಲ ಸ್ನಾನಕ್ಕೋ ಇನ್ನೊಂದಕ್ಕೋ ಚೊಂಬು ಬಕೆಟ್ ಸಿಗಲಾರದವ್ರು ಉಸ್ರು ಕಟ್ಟೋ ಹಂಗ ಓಡಿ ಅಸ್ಸೆಂಬಲಿ ಲೈನ್ ಸೇರ್ಕೊಳ್ಳೋರು. ಹಂಗ ಓಡಿ ಬರೋದ್ ಲೇಟ್ ಆದ್ರ ಮತ್ತ ಪಿಇಟಿ ಸರ್ ಕೈಯಾಗ್ ಬೀಳ್ತಿದ್ವು. ಪಿಇಟಿ ಸರ್ ಎಲ್ಲರದು ಶೂ ಚೆಕ್ ಮಾಡಿ ಜೂನಿಯರ್ಸ್ ಯಾರಾದ್ರೂ ಧಿಮಾಕ್ ಮಾಡ್ಲಿಕ್ಕೆ ಪ್ಯಾಂಟ್ ಹಾಕೊಂಡ್ ಬಂದಿದ್ರ ಮತ್ತ ಒಂದೆರಡು ಕೊಡ್ತಿದ್ರು. ಆದರು ಕೆಲುವೊಂದು ಡಿಬಿಗಳು(DB's) ಪಿಇಟಿ ಸರ್ ಗೆ ಅಡಿ ಹಚ್ಚಿ ಅದೆಂಗೋ ತಪ್ಪುಸ್ಕೊಳ್ಳೋರು. ಉಳದವ್ರ ಪ್ಯಾಂಟ್ ಜೇಬಿನಗಾ ಕೈ ಹಾಕಿ ಸರಕ್ ಅಂತ ಎಳ್ದು ಪೂರಾ ಪ್ಯಾಂಟ್ ಹರಿತಿದ್ರು ಪಿಇಟಿ ಸರ್.
ಅಸ್ಸೆಂಬಲಿ ನ್ಯಾಗ ಗಿಡ್ಡ ಇರೋರ್ದೆ ಒಂದು ದೊಡ್ಡ ಟೆನ್ಶನ್ ಪಾಪ. ಮ್ಯೂಸಿಕ್ ಸರ್.. ಮುಂದಿನ ಒಂದ ಎರ್ಡ ಲೈನ್ ನ್ಯಾಗ ನಿಂತೋರು ಎಲ್ಲರಿಗಿಂತ ಹೆದ್ರುಕೋಳ್ಳೊದ ಮ್ಯೂಸಿಕ್ ಸರ್ ಗೆ. ಮ್ಯೂಸಿಕ್ ಸರ್ ಮಿಸ್ ಮಾಡಲಾರದೆ ಎಲ್ಲರು ಜೋರಾಗ್ ಹಾಡ್ತಾರೋ ಇಲ್ಲೋ ಅಂತ ನೋಡೋರು. ಅಪ್ಪಿ ತಪ್ಪಿ ಯಾರಾದ್ರೂ ಹಾಡ್ಲಾರ್ದವರು ಕಣ್ಣಿಗೆ ಬಿದ್ರೋ..ಸತ್ತ್ರು.. ಮ್ಯೂಸಿಕ್ ಸರ್ ಅಸ್ಸೆಂಬಲಿ ಮುಗುಡ್ ಮ್ಯಾಲೆ ಡಿಸ್ಪೆರ್ಸ್ ಆಗೋಕಿಂತ ಮೊದ್ಲು ಮಸ್ತ್ ಸ್ಮೈಲ್ ಮಾಡ್ಕೋತ ಬರೋರು. 'ಯಾಕ್ಪಾ ಏನಾತು ಹಾಡವಲ್ಲಿ' ಅಂತ ನಕ್ಕೋತೆ ರಪ್ ರಪ್ ಅಂತ ಮಾರಿಗ್ ಬರ್ಸೊರು. ಹೊಡುಸ್ಕೊಂಡೋರ್ ಗಲ್ಲ ಫುಲ್ ಕೆಂಪ್ ಕೆಂಪ್ ಗ.
ಅಸ್ಸೆಂಬಲಿ ಎಲ್ಲರಿಗೆ ಸಾಕ್ ಸಾಕ್ ಅನ್ಸಿದ್ರುನು ಏನೋ ಒಂಥರಾ ಖುಷಿ ಕೊಡೋದು. ನವೋದಯ ಹಾಡು, ದಿನ ಬೇರೆ ಬೇರೆ ಭಾಷಣ ಸ್ಟೇಜ್ ಮ್ಯಾಲೆ. ಒಂದು ದಿನ ಬರಿ ಭಾಷಣ ಇನ್ನೊಂದಿನ ಸುಳ್ಳು ವಾರ್ತೆ. ದಿನ ಥಾಟ್ ಫಾರ್ ದಿ ಡೇ ಅಂತೂ ಇರೋದು. ಒಬ್ಬೊಬ್ರು ಎಫರ್ಟ್ ಹಾಕಿ ಒಳ್ಳೆ ಥಾಟ್ ಹೇಳಿದ್ರೆ ಇನ್ನು ಕೆಲುವೊಬ್ರು ಬರಿ 'ತಾಯಿಯೇ ದೇವರು' ನೋ ಇಲ್ಲ 'ಗಾಡ್ ಐಸ್ ಗ್ರೇಟ್' ಓ ಅಂತ ಹೇಳಿ ಮುಗ್ಸೋರು. ಸ್ಟೇಜ್ ಮ್ಯಾಲೆ ಆಗೋ ಮಿಸ್ಟೇಕ್ಸ್ ನ ನೋಡಿ ನಗೋದೇ ಒಂದು ಮಜಾ.
ಅಸೆಂಬ್ಲಿಯ ಭಾಳ್ ಹೊತ್ತು ಆಯ್ತಂದ್ರೆ ಸುಮ್ಮ್ ಸುಮ್ಮನೆ ತಲಿ ತಿರುಗಿ ಬೀಳೋರು ಭಾಳ್ ಕಾಮನ್. ಬಿದ್ದೋವ್ರನ್ನ ಕರ್ಕೊಂಡ್ ಹೋಗೋವ್ರದೇ ಚಾನ್ಸ್. ಆರಾಮಾಗಿ ಎಸ್ಕೇಪ್ ಆಗಿ ಬಿಡೋರು. ಸಿಕ್ ಆದವರಿಗೆ ನರ್ಸ್ ಮೇಡಂ ತಿಂಡಿಗೆ ಪಾರ್ಲೆ ಜಿ ಬಿಸ್ಕಿಟ್ ಹಾಲು ಬರ್ದು ಕೊಡೋರು. ದಿನ ತಿನ್ನೋ ತಿಂಡಿಗಿಂತ ಸ್ಪೆಷಲ್ ಪಾರ್ಲೆ ಜಿ ಬಿಸ್ಕಿಟ್ ತಿನ್ನೋದು ಏನೋ ಖುಷಿ.
ಮ್ಯೂಸಿಕ್ ಕ್ಲಬ್ members ಎಲ್ಲ ಹಾಡಿಗೋ ಒಂದೇ ಟ್ಯೂನ್ ಬಾರ್ಸವ್ರು. ತಬಲಾ ಕಾಂಗೊ ಪೇಟಿ ಎಲ್ಲ ಒಂದೇ ಮ್ಯೂಸಿಕ್ ಕೊಡೊವು. ಆದರು ೭ ವರ್ಷ ಕೇಳಾಕ್ ಏನು ಬ್ಯಾಸರ ಆಗಿಲ್ಲ.
ಡಿಸ್ಪೆರ್ಸ್ ಆಗೋ ಮುಂದ ಮ್ಯೂಸಿಕ್ ಬ್ಯಾಂಡ್ ಕೇಳೋದೂ ಅಷ್ಟೇ ಮಜಾ. ನವೋದಯ ದಾಗ ಓದಿರೋ ಪ್ರತಿಯೊಬ್ಬರಿಗೂ ಒಂದ್ ಸರಿಯರ ಆ ಮ್ಯೂಸಿಕ್ ಬ್ಯಾಂಡ್ ನ್ಯಾಗ್ ಇರ್ಬೇಕು ಅಂತ ಅನ್ನಿಸಿರಲೇಬೇಕು.
ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಅಂತ ಕ್ಲಾಸ್ ರೂಮ್ಸ್ ನಮ್ಮನ್ನ ಸ್ವಾಗತ ಮಾಡವು. ದಿನ ಮರಿಲಾರ್ದೆ 'ಅ ಜರ್ನಿ ಆಫ್ ಥೌಸಂಡ್ ಮೈಲ್ಸ್ ಸ್ಟಾರ್ಟ್ಸ್ ವಿಥ್ ಜಸ್ಟ್ ಒನ್ ಸ್ಟೆಪ್' ನ್ ಓದಿನೆ ಕ್ಲಾಸ್ ಗೆ ಹೋಗೋದು.
ಯೋಳು ವರಿ ಇಂದ ಎಂಟು ನಲ್ವತ್ತೈದರ ತಂಕ ಎರಡು ಕ್ಲಾಸೆಸ್. ಅಷ್ಟರಾಗೆ ಟೈಮ್ ಸಿಕ್ರೆ ಲೈಬ್ರರಿ ಗೆ ಓಡಿ ನ್ಯೂಸ್ ಪೇಪರ್ ಓದಿಕೊಂಡ ಬರೋದು. ಕ್ರಿಕೆಟ್ ಮ್ಯಾಚ್ ಇದ್ದಾಗಂತೂ ಲೈಬ್ರರಿ ಗೆ ಪೂರಾ ಡಿಮ್ಯಾಂಡ್.
ಬುಧವಾರ ನೋ ಇಲ್ಲ ಶನಿವಾರೋ ನೋ ಆಗಿದ್ರ ಬ್ರೇಕ್ಫಾಸ್ಟ್ ಮಜಾ ನೇ ಬ್ಯಾರೆ. ಎಲ್ಲರ ಫೇವರಿಟ್ ಕಿಚಡಿ. ಮೆಸ್ಸ್ ನವ್ರು ಅದೇನ್ ಹಾಕ್ತಿದ್ರೋ ಕಿಚಡಿ ನ್ಯಾಗ, ಅಬಬ ಏನ್ ಟೇಸ್ಟ್ ಅದು. ಕಿಚಡಿ ಜೊತಿಗೆ ಮನಿ ಇಂದ ತಂದ ಬ್ಯಾರೆ ಬ್ಯಾರೆ ಪುಡಿ ಹಾಕ್ಕೊಂಡ್ ತಿಂದ್ರೆ ಸೂಪರ್. ಪುಡಿ ಯಾರ್ ಹತ್ರ ಅದ ಅಂತ ಹುಡುಕ್ಲಿಕ್ಕೆ ಎಲ್ಲರು ಡೆಟೆಕ್ಟಿವ್ಸ್ ಆಗಿ ಬಿಡೋರು. ಇವನ ಹತ್ರ ಅದ ಅಂತ ಗೊತ್ತಾದ್ರೆ ಸಾಕು, ಹಿಂದಿನ ದಿನದಿಂದೆ ಅವ್ನಿಗೆ ಅಡಿ ಹಚ್ಚಕ್ ಸ್ಟಾರ್ಟ್. ಕಿಚಡಿ ಹಾಕುಸ್ಕೊಂಡು ಹೊರಗ್ ಎಸ್ಕೇಪ್ ಆಗಿ ಹೋದವರಂತೂ ಭಾರಿ ಪುಣ್ಯಾತ್ಮರು. ಎಲ್ಲ ಟೈಪ್ ಪುಡಿ ಉಪ್ಪಿನಕಾಯಿ ಹಾಕ್ಕೊಂಡ್ ಹಸಿರು ಇರೋ ಕಿಚಡಿ ನ ಕೆಂಪ್ ಮಾಡ್ಕೊಂಡ್ ತಿನ್ನೋರು. ಕಿಚಡಿ ದು ಎಲ್ಲದಕ್ಕಿಂತ ಸ್ಯಾಡ್ ಪಾರ್ಟ್ ಅಂದ್ರೆ ತಿಂದ್ಮ್ಯಾಲೆ ಪ್ಲೇಟ್ ತೊಳಿಯಾದು. ಅಬ್ಬಾ ಅದೇನ್ ಹಚ್ಚಿ ತೊಳಿತಿದ್ವೋ ಪ್ಲೇಟ್ ನ ಜಿಡ್ಡು ಹೋಗ್ಸಕ.
ಮಂಗಳವಾರ ಇಡ್ಲಿ ಚಟ್ನಿ ಸೆಕೆಂಡ್ ಫೇವರಿಟ್. ನವೋದಯ ದಾಗ ತಿಂದಿರೋ ಚಟ್ನಿ ಇನ್ನು ತಂಕ ಎಲ್ಲೂ ತಿಂದಿಲ್ಲ. ದಿನ ತಿಂಡಿ ಜೊತಿಗೆ ಸ್ಪೆಷಲ್ ಛಾ ಇಲ್ಲ ಬೌರ್ನ್ವಿಟಾ(ಛಾ ಕುಡಿಲಾರ್ದ ನನ್ನಂತವರಿಗೆ).
ಪ್ಲೇಟ್ ತೊಳಿಯೋದು ಭಾರಿ ಸ್ಟೈಲಾ ಮತ್ತ. ಟ್ಯಾಂಕ್ ಮ್ಯಾಲೆ ಒಂದು ಕಾಲು ಕೆಳಗ್ ಒಂದು ಕಾಲು ಇಟ್ಟು ನೀರ್ ಸಿಡಿಲಾರದಂಗ ತೊಳಿಯದು. ಭಾಳ್ ರಶ್ ಇತ್ತಂದ್ರ 'ಕುಡ್ಯಾಕ್ ಕುಡ್ಯಾಕ್ ಕುಡ್ಯಾಕ್' ಅಂದ್ರ ಸಾಕು ಜಾಗ ಸಿಗೋದು. ಕುಡ್ಯಾಕ್ ಹಿಡದಾಗ ಯಾವಾನರ ಒಂದ್ ಹನಿ ನೀರ್ ಸಿಡಸಿದ ಪ್ಲೇಟ್ ನ್ಯಾಗ ಅಂದ್ರ ಸಿಟ್ಟ ಆಗಿ 'ಕುಡ್ಯಾಕ್ ಲೇ ಮಂಗ್ಯಾ' ಅಂತ ಬೈದು, ಎಲ್ಲ ನೀರ್ ಚಲ್ಲಿ ಮತ್ತ ತುಂಬಸ್ಕೊಳ್ಳೋದು. ಯೋಳು ವರ್ಷದಾಗ ಒಂದ್ ಸಲ ನು ನೀಟ್ ಆಗಿ ಗ್ಲಾಸ್ ನ್ಯಾಗ್ ನೀರ್ ಕುಡ್ದಿಲ್ಲ. ಬರಿ ಪ್ಲೇಟ್ ನ್ಯಾಗೆ.
ಟಿಫನ್ ಮುಗ್ಸಿ ಪ್ಲೇಟ್ ಒಂದ ಬೆರಳಾಗ ತಿರ್ಗಿಸ್ಕೊತ ಡಾರ್ಮಿಟೋರಿ ಗೆ ಹೋಗದು. ಪ್ಲೇಟ್ ತಿರ್ಗ್ಸೋದೇ ಒಂದು ದೊಡ್ಡ ಸ್ಕಿಲ್ ಅಲ್ಲಿ. :-)
ಮಧ್ಯಾಹ್ನ ಊಟದ್ ಟೈಮ್ ನ್ಯಾಗ ಫಸ್ಟ್ ಬ್ಯಾಚ್ ಹೋಗೋರಿಗೆ ಯಾರ್ ಪ್ಲೇಟ್ ಇಸ್ಕೊತಾರೋ ಅನ್ನೋ ಟೆನ್ಶನ್. ಕರೆಕ್ಟ್ ಆಗಿ ನೆಂಪಿಟ್ಕೊಂಡ್ ರಾತ್ರಿ ವಾಪಸ್ ಇಸ್ಕೊಂಡಿಲ್ಲ ಅಂದ್ರೆ ಮತ್ತೆ ನೆಕ್ಸ್ಟ್ ಡೇ ಒದ್ದಾಡಬೇಕು. ಪ್ಲೇಟ್ ಮ್ಯಾಲೆ ಬ್ಯಾರೆ ಬ್ಯಾರೆ ಮೂವಿ ಹೆಸರೋ ಇಲ್ಲ ಇನ್ನೇನೋ ಹೆಸರೋ ಬರ್ಕೊಳ್ಳೋದು. ಇಲ್ಲಾಂದ್ರೆ ಒಂದ ಸಲ ಕಳೀತಂದ್ರೆ ಹೋತೇ ಪ್ಲೇಟ್. ಖಾನಿ ಪ್ಲೇಟ್ ಅಂತೂ ಬ್ಯಾರೆ ಕಲರ್ ಆಗಿರವು ಜಿಡ್ಡು ಹಿಡದು.
ಟೇಸ್ಟ್ ಹೆಂಗೆ ಇದ್ರೂ ನಮ್ ನವೋದಯ ಊಟಾನ ಎಂದು ಮರಿಯಲ್ಲ.
ಹೌಸ್ ಆನ್ ಡ್ಯೂಟಿ ಇರೋರ್ದೆ ಲಕ್ಕು. ಎಲ್ಲರದು ಆದ್ಮೇಲೆ ಉಳ್ದಿದ್ದೆಲ್ಲ ಅವರದೇ. ಫುಲ್ ಮಜಾ. ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ ಅಂತ ಹಾಡಿ ತಿಂದ್ರೇನೇ ನಮ್ ಹೊಟ್ಟಿಗೆ ಊಟ ಹತ್ತೋದು.
ಮಧ್ಯಾಹ್ನ ಊಟ ಆದ್ಮೇಲೆ ಸುಖಪುರುಷರು ನಿದ್ದಿ ಮಾಡೋರು. ಸ್ವಲ್ಪ ಧೈರ್ಯ ಇರೋರು ಕಾಂಪೌಂಡ್ ಹಾರಿ ಗುದ್ನೇಪ್ಪನ ಮಠಕ್ಕ ಹೋಗಿ, ಶೆಟ್ಟಿ ಅಂಗಡಿ ನ್ಯಾಗ ೫ ರೂಪಾಯಿ /ಮಿನಿಟ್ ಮನಿಗ್ ಫೋನ್ ಮಾಡಿ ಏನಾರ ತಿನ್ಲಿಕ್ಕೆ ತೊಗೊಂಡ್ ಬರೋರು. ಇನ್ನು ಕೆಲವೊಬ್ರು ಟೈಮ್ ಇದ್ರೆ ಬಟ್ಟಿ ಎಲ್ಲ ಒಕ್ಕೊಳೋರು.
ಮಧ್ಯಾಹ್ನ ಸ್ಟಡಿ ಗೆ ನಿದ್ದಿಗಣ್ಣಿನ್ಯಾಗ ಹೋಗದು. ಏನ್ ಓದತಿದ್ಯೋ ಇಲ್ಲೋ, ಲೈಬ್ರರಿ ಇಲ್ಲ ಕಂಪ್ಯೂಟರ್ ಲ್ಯಾಬ್ ಹೋಗಿ ಟೈಮ್ ಅಂತೂ ಪಾಸ್ ಮಾಡತಿದ್ವಿ. ಸ್ಟಡಿ ಟೈಮ್ ಸ್ಟಡೀಸ್ ಗಿಂತ ಮಜಾ ಮಾಡೋ ಟೈಮ್ ಅನ್ನಬೋದು. ಬುಕ್ ಕ್ರಿಕೆಟ್ , ಪಾಕೆಟ್ ರೇಡಿಯೋ ದಾಗ ಕ್ರಿಕೆಟ್ ಕಾಮೆಂಟರಿ, ಲೈನ್ಸ್ ಗೇಮ್, ಅಕಸ್ಮಾತ್ ಹೊರಗ್ ಕೂಡೋ ಚಾನ್ಸ್ ಸಿಕ್ರೆ ಕೈಗೆ ಇನ್ನು ಮಜಾ.
ಸೋಶಿಯಲ್ ಸರ್ ಡೈಲಿ ನ್ಯೂಸ್ ಹೇಳಲಿಲ್ಲ ಅಂದ್ರೆ ಪಾಠ ಮಾಡಕ್ಕೆ ಬಿಡ್ತಿರ್ಲಿಲ್ಲ. ಪಿಇಎಟಿ ಇಲ್ಲ ಆರ್ಟ್ಸ್ ಕ್ಲಾಸ್ ಇರೋ ದಿನಕ್ಕೆ ಕಾಯಿಕೊಂಡ್ ಕೂತಿರ್ತಿದ್ವಿ.
ಸಂಜಿಗೆ ಕೊಡೊ ಪಾರ್ಲೆ ಜಿ ಬಿಸ್ಕತ್ ಇಲ್ಲ ಅವಲಕ್ಕಿ ಅಂತೂ ಇನ್ನು ನೆನಪದ. ಮೆಸ್ ಬಾಜು ಲೈನ್ ನಿಂತು ಕಿಡಕಿ ನ್ಯಾಗ್ ಇಸ್ಕೊಳ್ಳೋದು. ಲೇಟ್ ಆಗಿ ಬಂದೋರಿಗೆ ಏನು ಇಲ್ಲ ಬರಿ ಟೀ ಕುಡದು ಖುಷಿ ಆಗ್ಬೇಕಿತ್ತಷ್ಟೆ.
ಸ್ಪೋರ್ಟ್ಸ್ ಟೈಮ್ ಎಲ್ಲರು ತಮ್ಮ ತಮ್ಮ ಹೌಸಿನ ಟಿ ಶರ್ಟ್ ಹಾಕ್ಕೊಂಡು ರೆಡಿ ಆಗೋದು. ಲಕ್ಕಿ ದಿನ ಇದ್ರೆ ಫುಟ್ಬಾಲ್, ಇಲ್ಲ ಕ್ರಿಕೆಟ್/ವಾಲಿಬಾಲ್ ಸಿಗೋದು. ದಿನ ಭಾಳ ಹಾಳ್ ಇದ್ರ ಪಿಇಟಿ ಸರ್ ಕಾಂಗ್ರೆಸ್ ಕ್ಲೀನ್ ಮಾಡ್ಲಿಕ್ ಹಚ್ಚೋವ್ರು. ಬೇಜಾರಾದ್ರೂ ಅದ್ರಲ್ಲೇ ಮಜಾ ಮಾಡವ್ರು ನಾವು. ಕಾಂಗ್ರೆಸ್ ಜೊತಿ ಬೆಳಿಯೋ ಉದ್ದನ್ ಹುಲ್ಲಿನ ಗಿಡದಾಗ ಸಿಗೋ ಮುಳ್ಳಿನಂತವನ್ನ ತೊಗೊಂಡ್ ಬೇರೆವ್ರ ತಲಿಗೆ ಶರ್ಟ್ ಗೆ ಒಗಿಯೋದು, ಗುಲ್ಮೊಹರ್ ಗಿಡದ್ ಒಣಗಿದ್ ಕಡ್ಡಿ ತೊಗೊಂಡ್ ಕತ್ತಿ ವರಸೆ ಆಡೋರು. ಫುಟ್ಬಾಲ್ ಅಂದ್ರೆ ಅದೇನ್ ಖುಷಿ ನೋ. ಕ್ರಿಕೆಟ್ ಗಿಂತ ಫೇವರಿಟ್ ಇತ್ತು. ಮೋಸ್ಟ್ಲಿ ಎಲ್ಲರಿಗು ಆಡ್ಲಿಕ್ ಸಿಗ್ತದ ಅಂತೇನೋ.
ಆಡಬೇಕಾದ್ರ ಏನಾದ್ರು ಎಟ್ ಆದ್ರ ಸಿದ ನರ್ಸ್ ಮೇಡಂ ಹತ್ರ ಓಡೋದು. ಅವ್ರು ಕೊಡೊ Iodex ಹಚ್ಚಿದ್ರೆ ಸಾಕು ಎಂಥ ಪೈನ್ ಇದ್ರೂ ಫಟ್ ಅಂತ ಮಾಯ ಆಗೋದು. ಏನೇ ಬ್ಯಾನಿ ಇದ್ರೂ ಒಂದೇ ಥರ ಕಾಣೋ ಟ್ಯಾಬ್ಲೆಟ್ ಕೊಟ್ರು ಎಲ್ಲ ಕಡಿಮೆ ಆಗೋದು. ಅದೇನ್ ಮ್ಯಾಜಿಕ್ ಮಾಡಿರ್ತೀದ್ರೋ ನರ್ಸ್ ಮೇಡಂ. ಏನೇ ಅನ್ರಿ ಎಲ್ಲಕ್ಕಿಂತ ಜಾಸ್ತಿ ನಮ್ಮನ್ ಕಾಳಜಿ ಮಾಡಿದ್ದೂ ಅಂದ್ರೆ ಅವ್ರೆ.
ಸಂಜಿ ಸ್ಟಡಿಸ್ ಬೇರೆ ಮಜಾ. ಕ್ಲಾಸ್ ನ್ಯಾಗ ಕೂಡೋ ಬದ್ಲಿ ರೋಡ್ ಮ್ಯಾಲೋ ಸ್ಟ್ರೀಟ್ ಲೈಟ್ಸ್ ಕೆಳಗೋ ಹೋಗಿ ಕೂಡದು. ಎಷ್ಟೇ ಹುಳ ಕಡುದ್ರು ಏಳತಿರಲಿಲ್ಲ. ಟೀಚರ್ಸ್ ಇಂದ ಕಣ್ಣು ತಪ್ಸಿ ದೂರ ಕುಡೋದೇ ಒಂದು ಸಕ್ಸಸ್.
ಕೋ ಎಡ್ ಸ್ಕೂಲ್ ಆದರು ಹುಡಗೀರ್ ಜೊತಿಗೆ ಮಾತಾಡೋದಂತೂ ಕಮ್ಮಿ ನೇ. ಟೀಚರ್ಸ್ ಕಣ್ಣಿಗೆ ಬಿದ್ರೆ ಅಷ್ಟೇ ಕಥಿ. ಊಟ ಮಾಡೋಮುಂದ, ಕ್ಲಾಸ್ ನ್ಯಾಗ, ಮತ್ತ ಮಧ್ಯಾಹ್ನದ ಸ್ಟಡಿ ಟೈಮ್ ಗೆ ಅಷ್ಟ ಅವ್ರ ದರ್ಶನ. ಅದು ಬಿಟ್ರ ಸ್ಪೋರ್ಟ್ಸ್ ಟೈಮ್ ನ್ಯಾಗ ಬ್ಯಾಸ್ಕೆಟ್ಬಾಲ್ ಇಲ್ಲ ಟೇಬಲ್ ಟೆನಿಸ್ ಅದೊಂದು ಕಾಮನ್ ಇರ್ತಿತ್ತು.
ಹುಡ್ಗೀರಿಗೆ ಏನೇನೋ ಎಕ್ಸ್ಟ್ರಾ ಫೆಸಿಲಿಟಿ ಇರತಾವ ನಮ್ಗೆಲ್ಲಾ ಏನು ಇರಲ್ಲ ಅಂತ ಏನೇನೋ ಸುದ್ದಿ ಬರೋವು. ಬಟ್ ಅವರಿಗಿಂತ ನಮಗೆ ಫ್ರೀ ಅದ, ಕಾಂಪೌಂಡ್ ಹಾರಿ ಹೋಗಬೋದು ಅಂತ ಖುಷಿ ಆಗ್ತಿದ್ವಿ. ಅಪರೂಪಕ್ಕ ಒಮ್ಮೆ ಸಂಡೆ ಮೂವಿ ತೋರಸ್ಲಿಕ್ಕೆ ಅಲೋ ಮಾಡತಿದ್ರು. ಅದ್ರಾಗೂ ಹುಡುಗೀರ್ಗೆ ಫೇವರ್. ಮೊದ್ಲು ಅವ್ರು ನೋಡಿ ಆಮೇಲೆ ನಮಗ. ಅವ್ರಿಗೆ ಎರಡು ಮೊವಿವ ಆದ್ರ ನಮಗ ಒಂದ. ಆದರು ಕೆಲವೊಬ್ರು ಸೀನಿಯರ್ಸ್ ಏನೋ ಮಾಡಿ ಇನ್ನೊಂದ್ ಮೂವಿ ನೋಡ್ಲಿಕ್ ಟ್ರೈ ಮಾಡೋರು. ಕೆಲವೊಂದ್ಸಲ ಜೂನಿಯರ್ಸ್ ನ ಓಡ್ಸಿ ನೂ. :-ಪಿ
ಖರೆ ಹೇಳ್ಬೇಕಂದ್ರ ನವೋದಯದಾಗ ನಮಗೆ ಅಂತ ಇರೋ ಟೈಮೇ ರಾತ್ರಿ ಊಟ ಆದ್ಮೇಲೆ. ಹೌಸ್ ಮಾಸ್ಟರ್ ಅಟೆಂಡೆನ್ಸ್ ತೊಗೊಂಡ್ ಹೋಗೋ ತನಕ ಅಲ್ಲೇ ಗ್ರೌಂಡ್ ನ್ಯಾಗೂ ಇಲ್ಲ ವಾಟರ್ ಟ್ಯಾಂಕ್ ಮ್ಯಾಲೋ ಕೂತು ಹರಟಿ ಹೊಡಿಯೋದು. ಏನಾದ್ರು ಹೋಮೇವರ್ಕ್ ಕೊಟ್ಟಿದ್ರ ಮೊಗಸೋದು. ಜೂನಿಯರ್ಸ್ ಸೀನಿಯರ್ಸ್ ಎಲ್ಲ ಸೇರಿ ಇರೋ ಟೈಮ್ ಅಂದ್ರ ಅದೇ. ಜೂನಿಯರ್ ಹೌಸ್ ಗೆ ಹೋಗಿ ಊರಿಂದ ತಂದಿರೋ ಸ್ವೀಟ್ಸ್ ಎಲ್ಲ ಕಿತ್ಕೊಳ್ಳೋದೋ. ಯಾರ್ ಎಷ್ಟ್ ಬೈದ್ರು ಏನು ಎಫೆಕ್ಟ್ ಆಗ್ತಿರ್ಲಿಲ್ಲ. ಯಾರಾದ್ರೂ ಜೂನಿಯರ್ ಏನಾದ್ರು ಕಿತಾಪತಿ ಮಾಡ್ಯಾನ ಅಂತ ಗೊತ್ತಾದ್ರೆ ಅವ್ನಿಗೆ ವಿಚಾರಿಸೋದು. ಇಲ್ಲ ಯಾರೋ ಪಾಪದ್ ಪ್ರಾಣಿ ಸಿಕ್ರೆ ಸುಮ್ನೆ ಗೋಲೋಯ್ಕೊಳ್ಳೋದು.
ಏನೇನ್ ಮಾಡಕ್ ಅಲೋ ಇಲ್ಲ ಅದನ್ನೇ ಜಾಸ್ತಿ ಮಾಡ್ತಿದ್ವಿ. ಐರನ್ ಬಾಕ್ಸ್ ಇಟ್ಕೊಳ್ಳೋದು, ಟೇಪ್ ರೆಕಾರ್ಡರ್, ಪಾಕೆಟ್ ರೇಡಿಯೋ. ಭಾಳ್ ಡೇರಿಂಗ್ ಇರೋರು ಸೈಲೆಂಟಾಗಿ ಕಾಂಪೌಂಡ್ ಹಾರಿ ಕುಕ್ನೂರ್ ಗ ಹೋಗಿ ಸಿನೆಮಾ ನು ನೋಡ್ಕೊಂಡ್ ಬರೋರು. ನೋಡ್ಕೊಂಡ್ ಬಂದು ಚಂದು ಇಲ್ಲ ಶಾಂತಪ್ಪನ ಕೈಯಾಗ ಸಿಕ್ಕಿ ಬಿದ್ದವರು ನೆಕ್ಸ್ಟ್ ಡೇ ಅಸ್ಸೆಂಬಲಿ ಮ್ಯಾಲೆ. :-ಪಿ
ಎಷ್ಟೋ ಸಲ ಮುಂಜಾನೆ ತನಕ ರೂಮ್ ನ್ಯಾಗೆ ಕಿರ್ರ್ ಇಲ್ಲ ಬಿಸಿನೆಸ್ ಗೇಮ್ ಆಡ್ಕೋತ ಕೂಡೋದು.
ಟೆರೇಸ್ ಮೇಲೆ ಬೆಡ್ ಹಾಸ್ಕೊಂಡು ನಕ್ಷತ್ರ ನೋಡ್ಕೊತು ಮಲಗಿದ್ ಭಾವನೆ ಖುಷಿ ಯಾವ್ ಫೈವ್ ಸ್ಟಾರ್ ಹೋಟೆಲ್ ನ್ಯಾಗ ಎಂಥ ಬೆಡ್ ಮೇಲೆ ಮಲ್ಕೊಂಡ್ರೂ ಸಿಗಲ್ಲ ಅನ್ಸುತ್ತ.
ಇಡೀ ದಿನದ್ ಕ್ಷಣಗಳನ್ನ ನೆನಸ್ಕೊತ, ಬರೋ ದಿನದ ಕನಸನ್ನ ಕಾಣತಾ, ನಿದ್ದಿ ಹತ್ತಿದ್ದೇ ಗೊತ್ತಾಗತಿರ್ಲಿಲ್ಲ. ಮತ್ತೆ ಎಚ್ಚರ ಆಗೋದು 'ಮೂಷಿಕ ವಾಹನ ಮೋದಕ ಹಸ್ತ' ಕೇಳಿದಾಗೆ.
- ಕಾರ್ತೀಕ್ ಜೋಶಿ
2015 ರಲ್ಲಿ ನಾವು ಇದನ್ನ ಆರಂಭ ಮಾಡಿದಾಗ ಬಹುಶಃ ನಮಗೂನು ಗೊತ್ತಿರಲಿಲ್ಲ ಇದು ಇಷ್ಟು ದೊಡ್ಡ ಕೂಟ ಆಗುತ್ತಾ ಅಂತ. ಬಿಟಿಎಂ ನ ಒಂದು ರೂಮ್ ನಲ್ಲಿ ಹುಟ್ಟಿಕೊಂಡ ಒಂದು ಸಣ್ಣ ಯೋಚನೆ ಇಂಥ ಮಹಾ ಹಬ್ಬ ಆಗಿರೋದು ಒಂದು ಅಧ್ಭುತ ನೇ.
ಇನ್ನೇನು ಒಂದೇ ವಾರದಲ್ಲಿ ಹೊಸ ಆವೃತ್ತಿ ಪ್ರಾರಂಭ ಆಗ್ತಾ ಇದೆ. ಅದಕ್ಕಿಂತ ಮೊದ್ಲು ಇಲ್ಲೀ ವರೆಗೂ ಆಗಿರೋ ಮೂರು ಆವೃತ್ತಿಗಳ ನೆನಪುಗಳನ್ನ ಮೆಲುಕು ಹಾಕೋಣ ಬನ್ನಿ.
ಅಂಕುರ್ ಚಾಂಪಿಯನ್ಸ್ ಲೀಗ್ ಆವೃತ್ತಿ 1 :
ಬಿಟಿಎಂ vs ಜೆಪಿ ನಗರ್ ಅಂತ ಪುಟ್ಟೇನಹಳ್ಳಿ ಆಟದ ಮೈದಾನದಲ್ಲಿ ಪ್ರತಿ ವಾರ ಎರಡು ರೂಮ್ ಮಧ್ಯ ಕ್ರಿಕೆಟ್ ಆಡ್ತಾ ಆಡ್ತಾ, ನವೋದಯದ ಎಲ್ಲ ಬ್ಯಾಚ್ ನು ಒಟ್ಟು ಮಾಡಿ ಆಡಿದ್ರೆ ಇನ್ನೂ ಚೆನ್ನಾಗಿರುತ್ತಲ್ಲ ಅಂತ ಆರಂಭ ಆಗಿದ್ದೇ ಅಂಕುರ್ ಚಾಂಪಿಯನ್ಸ್ ಲೀಗ್.
ಹಂಗೂ ಹಿಂಗೂ ಮಾಡಿ ಏಪ್ರಿಲ್ 25, 26 2015 ರಂದು ಬನ್ನೇರುಘಟ್ಟ ಐಐಟಿ ಮೈದಾನದಲ್ಲಿ ಅಂಕುರ್ ಚಾಂಪಿಯನ್ಸ್ ಲೀಗ್ ಒಂದನೇ ಆವೃತ್ತಿ ಆರಂಭ ಆಯ್ತು. ಮೊದಲನೇ ಆವೃತ್ತಿ ಗೆ 9 ಮತ್ತು 11ನೆ ಬ್ಯಾಚ್ ನ ಅಣ್ಣದ್ರಿಂದ ಸೇರ್ಕೊಂಡು 22 ನೇ ಬ್ಯಾಚ್ ನ ತಮ್ಮಂದಿರ ವರೆಗೂ ಬಂದಿದ್ದು ಬರಿ 12 ಟೀಮ್ಸ್ ಮಾತ್ರ.
ನವೋದಯ ಬಿಟ್ಟು ಎಷ್ಟೋ ವರ್ಷಗಳಾಗಿದ್ರು, ಇನ್ನೂ ನವೋದಯದಲ್ಲೇ ಇದೀವಿ ಅನ್ನೋ ಥರ ಪ್ರತಿಯೊಬ್ಬರು ಮನಸಾರೆ ಆಟ ಆಡಿದ್ರು. ಒಂದೇ ಮೈದಾನ, ಮಳೆರಾಯನ ಅಡಚಣೆಗಳ ನಡುವೆಯೂ ಮೊದಲನೇ ದಿನ ಲೀಗ್ ಪಂದ್ಯಗಳು ಹಾಗೂ ಎರಡನೇ ದಿನ ನಾಕ್ ಔಟ್ ಪಂದ್ಯಗಳು ನಡದ್ವು.
ನಾವೇ ಆಯೋಜಿಸಿರೋ ಮೊದಲನೇ ಪಂದ್ಯಾವಳಿ ಗೆಲ್ಲಲೇ ಬೇವು ಅಂತೀರೋ ನಮ್ಮ ಬ್ಯಾಚ್ ನ ಕನಸು ಸೆಮಿ ಫೈನಲ್ ನಲ್ಲೆ ಕೊನೆಯಾಯ್ತು.
ಉತ್ತಮ ಪ್ರತಿಭೆಯುಳ್ಳ 15 ನೇ ಬ್ಯಾಚ್ ಹಾಗೂ 18 ನೇ ಬ್ಯಾಚ್ ಫೈನಲ್ ತಲುಪಿದ್ವು. ಎರಡು ದಿನಗಳ ಆ ಆಟದ ಹಬ್ಬದಲ್ಲಿ ಎರಡೂ ದಿನ ಅಧ್ಭುತ ಆಟ ಪ್ರದರ್ಶಿಸಿದ 18 ನೇ ಬ್ಯಾಚ್ ನವ್ರು ಮೊದಲ ACL ಗೆದ್ದುಕೊಂಡರು.
ಬಹುಶಃ ಇದೆ ಮೊದಲ ಬಾರಿಗೆ ಬ್ಯಾಚ್ ಗಳ ಮಧ್ಯ ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು. ಬರಿ 12 ಟೀಮ್ ಗಳಿದ್ರೂ ಮೊದಲನೇ ವರ್ಷ ಎಲ್ಲರ ಸಂಭ್ರಮ ಸಡಗರಕ್ಕೇನು ಕೊರತೆ ಇರಲಿಲ್ಲ. ಗೆಲುವಿಗಿಂತ ಎಲ್ಲರಿಗೂ ಅಲ್ಲಿ ಪಾಲ್ಗೊಳ್ಳೋದೇ ಅಂದು ಸುಗ್ಗಿ ಅನಿಸಿತ್ತು.
ಸಮಯದ ಅಭಾವದ ನಡುವೆಯೂ ಅಂತ್ಯಂತ ಶಿಸ್ತು ಹಾಗು ಪರಿಶ್ರಮದಿಂದ ಮೊದಲನೇ ACL ಯಶಸ್ವಿ ಆಗಿದ್ದಕ್ಕೆ ನಮಗೆ ತುಂಬಾ ಸಂತೋಷ ಆಗಿತ್ತು.
ಅಂಕುರ್ ಚಾಂಪಿಯನ್ಸ್ ಲೀಗ್ ಆವೃತ್ತಿ 2 :
ಮೊದಲನೇ ACL ನ ಒಂದೇ ಕೊರಗು, ಜಾಸ್ತಿ ಬ್ಯಾಚ್ ಗಳು ಪಾಲ್ಗೊಳ್ಳಲಿಲ್ಲ ಅಂತ. ಆ ಕೊರಗು ACL 2 ಅಲ್ಲೇ ಕೊನೆಯಾಯ್ತು. 14 ನೇ ಬ್ಯಾಚ್ ಆಯೋಜಿಸಿದ್ದ ಎರಡನೇ ಆವೃತ್ತಿ ಎಲ್ಲಕ್ಕಿಂತ ಅದ್ಧೂರಿ ಆಗಿತ್ತು. ಮಾರ್ಚ್ ಅಲ್ಲಿರೋ ಪಂದ್ಯಾವಳಿ ಗೆ ನವೆಂಬರ್ ಇಂದಾನೆ ಯೋಜನೆ ಪ್ರಾರಂಭವಾಗಿತ್ತು. ಮಾರ್ಚ್ 12 & 13 ರಂದು ವೆಟರ್ನರಿ ಕಾಲೇಜ್ ಮೈದಾನ ದಲ್ಲಿ ACL 2 ವೇದಿಕೆ ಸಜ್ಜಾಯ್ತು. ಅನುಕೂಲವಾಗಲೆಂದು ಅದೇ ಕಾಲೇಜ್ ನ ಕ್ರಿಕೆಟ್ ಮೈದಾನದ ಜೊತೆ ಒಂದು ಹಾಕಿ ಮೈದಾನ ಸೇರಿ ಒಟ್ಟು 3 ಮೈದಾನ ಸಜ್ಜಾದ್ವು.
14 ನೇ ಬ್ಯಾಚ್ ನ ಶ್ರಮದಿಂದ ಮತ್ತು ಉತ್ತಮ ಪ್ರಚಾರದಿಂದ ACL 2 ರಲ್ಲಿ 18 ಬ್ಯಾಚ್ ಗಳು ಪಾಲ್ಗೊಂಡವು. ಆ 18 ರಲ್ಲಿ 6 ಸೀನಿಯರ್ ಬ್ಯಾಚ್ ಗಳು ಮೊದಲ ಬಾರಿ ACL ನಲ್ಲಿ ಪಾಲ್ಗೊಂಡಿದ್ದು ಅಂತ್ಯಂತ ಸಂತೋಷದ ವಿಷಯ. ಒಂದನೇ ಬ್ಯಾಚ್ ನಿಂದ 23 ನೇ ಬ್ಯಾಚ್ ನ ವರೆಗೂ ಎಲ್ಲರೂ ಒಂದೇ ವೇದಿಕೆಯಲ್ಲಿ ಒಂದುಗೂಡಿದ್ದೆವು. ನಮೆಲ್ಲ ನವೋದಯನ್ಸ್ ಗೆ ಇದಕ್ಕಿಂತ ಸಂಭ್ರಮದ ವಿಷಯ ಬೇರೆ ಇರಲಿಕ್ಕಿಲ್ಲ.
ತಂಡಗಳು ಜಾಸ್ತಿ ಆಗಿದ್ದಕ್ಕೆ ಆಯೋಜಕರಿಗೆ ಕೆಲಸಗಳೂ ಜಾಸ್ತಿ ಆಗಿತ್ತು. ಇದೆಲ್ಲದರ ನಡುವೆಯೂ, ಉತ್ತಮ ಆಟ ಪ್ರದರ್ಶಿಸಿ ಫೈನಲ್ ಪ್ರವೇಶಿದರು. ಅಂತ್ಯಂತ ರೋಮಾಂಚಕಾರಿ ಫೈನಲ್ ಪಂದ್ಯದಲ್ಲಿ 20 ನೇ ಬ್ಯಾಚ್ ಅವ್ರು ಎರಡನೇ ACL ಕಪ್ ತಮ್ಮದಾಗಿಸಿಕೊಂಡರು. ಮೊದಲ ಆವೃತ್ತಿಯ ವಿಜೇತ 18 ನೇ ಬ್ಯಾಚ್ ಹಾಗೂ ಆಯೋಜಕರಾದ 14 ನೇ ಬ್ಯಾಚ್ ನಡುವೆ ನಡೆದ ಸೆಮಿ ಫೈನಲ್ ಪಂದ್ಯ ACL ನ ಎಂದು ಮರೆಯಲಾಗದ ಪಂದ್ಯ.
ಎರಡನೇ ACL ಆವೃತ್ತಿ ತುಂಬಾ ಯಶಸ್ವಿ ಯಾಗಿ ನಡೆದು ಬಂತು. ಇದೆ ಆವೃತ್ತಿ ಯಲ್ಲಿ ACL ನ ಬಾವುಟವನ್ನೂ ಉದ್ಘಾಟನೆ ಮಾಡಲಾಯಿತು.
ಅಂಕುರ್ ಚಾಂಪಿಯನ್ಸ್ ಲೀಗ್ ಆವೃತ್ತಿ 3 :
ACL 2 ರ ಯಶಸ್ಸನ್ನು ಮುಂದುವರಿಸುವ ಹೊಣೆ 15 ನೇ ಬ್ಯಾಚ್ ಮೇಲಿತ್ತು. ಅದಕ್ಕೆ ತಕ್ಕಂತೆ 15 ನೇ ಬ್ಯಾಚ್ ನವ್ರು ಬಹಳ ಮುಂಚೆನೇ ಸಿದ್ಧತೆ ಆರಂಭಿಸಿದ್ರು. ಎಲ್ಲರಿಗೂ ಅನುಕೂಲವಾಗುವಂತೆ ಒಂದೇ ಕಡೆ 3 ಮೈದಾನ ಇರೋ ಕೆ ಆರ್ ಪುರದ ಐಟಿಐ ಮೈದಾನದಲ್ಲಿ ಫೆಬ್ರವರಿ 25 & 26 ರಂದು ACL 3 ಆಯೋಜಿಸಲಾಗಿತ್ತು. ವಿಭಿನ್ನ ಮಾದರಿಯಲ್ಲಿ ಪ್ರಚಾರ ಮಾಡಿ ತುಂಬಾ ಶ್ರಮ ಪಟ್ಟು 17 ಬ್ಯಾಚ್ ಪಾಲ್ಗೊಳ್ಳುವತೆ 15 ನೇ ಬ್ಯಾಚ್ ಮಾಡಿದರು.
ACL 3 ರ ಮುಖ್ಯ ಆಕರ್ಷಣೆ ನಮ್ಮೆಲ್ಲರ ನೆಚ್ಚಿನ ಕಿಚಡಿ ಹಾಗು ಬನಾನಾ ಕಸ್ಟರ್ಡ್ ಹಾಗೂ ನಮ್ಮೆಲ್ಲರ ಅಚ್ಚು ಮೆಚ್ಚಿನ ಗುರುಗಳು ಆಟ ನೋಡಲು ಬಂದಿದ್ದು. ಇದನ್ನು ಆಯೋಜಿಸಿದ 15 ನೇ ಬ್ಯಾಚ್ ಅವ್ರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಸಾಲದು.
ಮೊದಲ 2 ACL ಅಲ್ಲಿ ಜಾಸ್ತಿ ಹವಾ ಮಾಡದ 22 ನೇ ಬ್ಯಾಚ್ ಅವ್ರು ಈ ಸಲ ಗೆಲ್ಲಲೇ ಬೇಕು ಅಂತ ಬಂದಿರೋ ಹಂಗಿತ್ತು. ಲೀಗ್ ಮತ್ತು ನಾಕ್ ಔಟ್ ನ ಪ್ರತಿ ಪಂದ್ಯ ನು ಅತೀ ಸುಲಭವಾಗಿ ಗೆದ್ದು ಫೈನಲ್ ಪ್ರವೇಶಿಸಿದ್ರು.
ಇನ್ನೊಂದ್ ಕಡೆ 17 ನೇ ಬ್ಯಾಚ್ ಅವ್ರು ಗ್ರೂಪ್ A ನ ಕೊನೆ ತಂಡ ಆಗಿ ನಾಕ್ ಔಟ್ ಗೆ ಪ್ರವೇಶ ಪಡುದ್ರು. ಎರಡನೇ ದಿನ 4 ಪಂದ್ಯ ಆಡಬೇಕಾಗಿ ಬಂದ್ರು, ಬಲಿಷ್ಠ 22 ನೇ ಬ್ಯಾಚ್ ಜೊತೆ ಫೈನಲ್ ಗೆದ್ದು ACL 3 ತಮ್ಮದಾಗಿಸಿ ಕೊಂಡ್ರು. ಬಹುಶಃ ACL ನ ಒಂದು ಅತ್ಯುತ್ತಮ ಸಾಧನೆ ಇದಾಗಿತ್ತು.
ಎಲ್ಲರಿಗೂ ಗೊತ್ತಿರುವಂತೆ 15 ನೇ ಬ್ಯಾಚ್ ಎಲ್ಲಕ್ಕಿಂತ ಪ್ರತಿಭೆಯುಳ್ಳ ತಂಡ. ಆಯೋಜನೆಯ ಒತ್ತಡದಿಂದಲೋ ಇಲ್ಲ ಜಾಸ್ತಿ ಕಿಚಡಿ ತಿಂದೋ ದುರುದೃಷ್ಟಕರವಾಗಿ 15 ನೇ ಬ್ಯಾಚ್ ಅವ್ರು ಲೀಗ್ ಸುತ್ತಿನಲ್ಲೇ ಹೊರ ಬಿದ್ರು. ಇದಾದ್ರೂ ಸಹ ಪ್ರತಿಯೊಬ್ಬರೂ ನಿಷ್ಠೆಯಿಂದ ಪಂದ್ಯಾವಳಿಯನ್ನು ನಡೆಸಿ ಕೊಟ್ಟರು. ಅವರ ಪರಿಶ್ರಮ ನಿಜಕ್ಕೊ ಪ್ರಶಂಸಾರ್ಹ.
ಇನ್ನೇನು ಒಂದೇ ವಾರದಲ್ಲಿ ಅಂಕುರ್ ಚಾಂಪಿಯನ್ಸ್ ಲೀಗ್ ನ ನಾಲ್ಕನೇ ಆವೃತ್ತಿ ಪ್ರಾರಂಭವಾಗ್ತ ಇದೆ. ಎಲ್ಲ ಬ್ಯಾಚ್ ನವ್ರು ಎಂದಿಗಿಂತ ಹೆಚ್ಚು ಅಭ್ಯಾಸ ಮಾಡಿ ಈ ಸಲ ಕಪ್ ತಮ್ಮದೇ ಆಗಿಸಿಕೊಳ್ಳಬೇಕು ಅನ್ನೋ ತವಕದಿಂದ ಇರ್ತೀರಿ.
ಈ ಸಲ 16 ನೇ ಬ್ಯಾಚ್ ಅವ್ರು ಅದೇ ಶಿಸ್ತು ಮತ್ತು ಶ್ರಮದಿಂದ ACL 4 ಆಯೋಜಿಸ್ತಾ ಇದಾರೆ. ಈ ಸಲನು ಸುಮಾರು 20 ಬ್ಯಾಚ್ ಗಳು ಪಾಲ್ಗೊಳ್ತಾ ಇವೆ. ಪೈಪೋಟಿ ಹೆಚ್ಚಾಗಿದೆ. ಎಲ್ಲ ಬ್ಯಾಚ್ ಗಳಿಗೂ ಒಳ್ಳೆಯದಾಗಲಿ.
ನಿಜಕ್ಕೊ ನಮ್ಮೆಲ್ಲರಿಗೂ ಇದೊಂದು ಹಬ್ಬ ನೇ. ಎಲ್ಲ ಗೆಳೆಯರನ್ನ ಭೇಟಿಯಾಗುವ ಹಬ್ಬ, ಗೆಳೆಯರೊಡಗೂಡಿ ಆಡುವ ಹಬ್ಬ, ನವೋದಯದ ಒಗ್ಗಟ್ಟನ್ನು ತೋರಿಸುವ ಹಬ್ಬ.
ಎಲ್ಲರೂ ಜೊತೆಗಿದ್ದಾಗ ತಾನೇ ಹಬ್ಬಕ್ಕೆ ಕಳೆ ಬರೋದು? ಬರ್ತಾ ಇದೀರಲ್ಲ ಹಬ್ಬಕ್ಕೆ?
ಎಲ್ಲ ಆವೃತ್ತಿಯಂತೆ ಈ ಆವೃತ್ತಿ ಕೂಡ ತುಂಬಾ ಯಶಸ್ವಿ ಆಗಲಿ ಅಂತ 16 ನೇ ಬ್ಯಾಚ್ ಗೆ ಹಾರೈಸುತ
- ನಿಮ್ಮ ಪ್ರೀತಿಯ 13th ಬ್ಯಾಚ್
A big thanks to all the ANKUR committee members for the idea of Association of Navodayans KUknooR. Without which there would have been no ACL and no connection between all of us. You are the rock stars.
Once again a big thanks to 14th and 15th batch for successfully organizing ACL 2 & 3.
Special thanks to all especially ladies who attended ACL and supported and encouraged your teams and made all previous seasons a big success.
By - Shruti Carol, Batch 11
When I tell my peers & friends that I am a product of Navodaya and have spent majority of my childhood in a residential school, they don’t believe me. Back then my parents too were skeptical about sending me away to hostel, they feared for my safety and emotional well-being. People told them that I could grow up disconnected from family. Being away from home, growing up in JNV Kuknoor, admist all the greenery and in a beautiful campus with hundreds of other students from various places, different religions and cultures is an experience I would never trade for anything else. We learnt to be strong, physically because our Navodayan PE teachers push you beyond your limits and mentally because it prepares you for every challenge in life. We learnt to be adaptable because you learn life skills here, take cold water showers in winter, 4.30 am jogs, migration to other states, basically they prepare you for any new difficult situations you may face in life. We learnt to love & celebrate all the religions and festivals because in Navodaya, everybody is equal, and we were taught to respect others as they are. We excelled in academics because we had the best teachers & they did everything they could to see you go from 85/100 to 95/100. Even an average player is given a chance and made a champion here. Our cultural events were the best, everyone danced, everyone sang, and everyone participated in debate. I find it astonishing that even with lack of technology & gadgets, we had best resources to learn from, our teachers! I feel very proud to say that JNV Kuknoor have some of the best teachers that I have known.
I came from a Kannada medium school, I always wanted to be in English medium school and this school gave me that opportunity and to learn from the best. JNV Kuknoor provided us the best library and lab facility. Our sports ground is amazing. Every student is nurtured here, like a budding plant.
Today, after 20 years of coming out of this beautiful institute, I am a very empathetic, passionate, strong and ambitious person and I owe it to JNVK for making me who I am, and I speak this on behalf of very many individuals I have met over the years, and they have all excelled in their career and life. I am forever grateful for this.
Every night before going to bed, I tell my 7 year old an incident from my JNV life. He easily prefers it over any bedtime story. After every incident, there’s a lesson I get to teach him. Consciously or sub-consciously there’s always something to learn from each of those incidents, probably something I didn’t realize back then but glad to have lived those to narrate to my kids.
By - Divya Patil, Batch 14
ಚಿರಋಣಿ
ಜನವಿ ಒಂದು ಮೂಡಣ
ತಂದಿತು ಬಾಲ್ಯದಿ ಹೊಂಗಿರಣ
ಯೌವನಕ್ಕೆ ಬೆಳಕಿನ ಕಣ
ಬಾಳಲಿ ಅರಿವಿನ ಕ್ಷಣ..
ಛಾಯೆಯಂತೆ ಬಿಡದೆ ಆವರಿಸಿದೆ ಕಣ್ಮನ.
ಸ್ವಪ್ನದಲ್ಲಿ ಈಗಲೂ ಕಾಣು(ಡು )ವ....
ಜಾಗಿಂಗ್ ನ ಆ ಜಾಗ ..
ಸ್ನಾನ ಪಾನ ಭೋಜನದ ಸಾಲು..
ಸಾಂಬಾರ್ ನ ಘಮಲು..
ಕಿಚಡಿಯ ಅಮಲು..
ಸಹಪಾಠಿ ಗಳೊಡನೆ ತುಂಟಾಟ..
ಸರದಿಗೆ ಕಾದಾಟ..
ಅವಸರದ ಆ ಓಟ..
ಲೇಟಾದರೆ ಪನಿಷ್ಮೆಂಟ್ ಕಾಟ ..
ಸೆಕೆಂಡಸಂಡೆ ಜಾಗಕೆ ಹುಡುಕಾಟ...
ಒಮ್ಮೆ ಶ್ರಮದಾನ..
ಮತ್ತೊಮ್ಮೆ ಕಲ್ಚರಲ್..
ಮಗದೊಮ್ಮೆ ಮೂನ್ಲೈಟ್ ಡಿನ್ನರ್..
ಸ್ಪೋರ್ಟ್ಸ್ಮೀಟ್ ಸಂಭ್ರಮ..
ಅನುಯಲ್ಡೇ ತಯಾರಿ..
ರಾಖಿಹಬ್ಬದಿ ಹುಡುಗರು ಪರಾರಿ..
ಟೀಚರ್ಸ್ ಡೇ ಆಚರಣೆ.. ಫೇರ್ವೆಲ್ಲದಿನದ ರೋಧನೆ..
ಕೊರೆಯುವ ಚಳಿ ..
ಹುಣಸೆ ಮರದ ಹುಳಿ..
ಯೂನಿಟ್ಟೆಸ್ಟ್ಗಳ ಹಾವಳಿ..
ನೆನೆದರೆ ಕಚಗುಳಿ..
ಸುಪ್ತದಿ... ಬಿಚ್ಚಿದೆ ನೆನಪಿನ ಸರಪಳಿ...
ಮನದಂಗಳದಿ ರಂಗು ರಂಗಿನ ರಂಗೋಲಿ.
ಸಪ್ತ ವರುಷದಲ್ಲಿತ್ತು ಗುರುಗಳ ಸಾನಿಧ್ಯ
ಸರ್ವಸ್ಥರದಲ್ಲೂ ಪಾತ್ರ ವೈವಿಧ್ಯ
ಆಚಾರವಿಚಾರ ಶಿಸ್ತು ಸುಶಿಕ್ಷಿತ
ಒಡನಾಡಿಗಳ ಸ್ನೇಹ ಪ್ರೀತಿ ಸುರಕ್ಷಿತ
ಹಿರಿಯರ ಒಡನಾಟದಿ ಭ್ರಾತೃತ್ವ ಭಾವ....
ಮರೆಸಿತ್ತು ಮಾತೃ ಪಿತೃವ
ಚಿಕ್ಕ ಮೂರ್ತಿಯ ಕೀರ್ತಿ ಹೆಚ್ಚಿತು..
ಪೈರು ಮೊಳಕೆಯಲ್ಲೇ ಹೊಳೆಯಿತು..
ಕುಲ ಭೇದ ವಿಲ್ಲ...
ಅನ್ಯರಲಿ ಅಸಹ್ಯವಿಲ್ಲ..
ಭಯ ಭಕ್ತಿಯಾಗಿ..
ಪ್ರೀತಿ ಶಕ್ತಿಯಾಗಿ..
ವಚನಗಾದೆಗಳ ಬುನಾದಿಯಲಿ..
ಅಂತರಂಗದ ಹಣತೆಯಲ್ಲಿ
ಸನ್ನಡತೆಯ ತೈಲ ವಿರಿಸಿ..
ಸಹಕಾರ ಸಹಬಾಳ್ವೆಯ ಬತ್ತಿಯ ಹೊಸೆದು..
ಸರ್ವತೋಮುಖ ಬೆಳವಣಿಗೆಯ ಪಥದಿ..
ಭವ್ಯ ಭವಿತವ್ಯದ ನಂದಾದೀಪ ಹಚ್ಚಿದ ನವೋದಯಕೆ ನಾ ಚಿರಋಣಿ.
ದಿವ್ಯಾ ಪಾಟೀಲ್
14ನೇ ಬ್ಯಾಚ್
By - Shivaganga Arali, Batch 13
By - Tejaswini Hiremath, Batch 11
Seven Years of Navodaya life is unforgettable and treasure of my life, it’s my mother’s wish that her daughter should get best education with regard to that I am blessed with not only best education more than that It was a period filled with life lessons, friendships and I learnt life ethics which shown path to me during all the worst /best circumstances of life.
Memory I never forget during Navodaya days. : The incident with scorpion sting when I was studying 9th std is remarkable and showcasing the quick response and care from my friends , Teachers and Nurse mam. Mam took me to the Hospital at kukanoor by school jeep and provided a immediate treatment. We came to school mid night till then my friends; Junior roommates (Nilgiri House) were awake and waiting for me. Nurse mam informed my friends to take care of me and not let me to sleep till morning. To keep me awake my batch superstar singers and dancers Sameena, Seema, Saroja, Shruti, Vinuta and my Junior friends Deepika , Kavita, Deepa, Nanda , Anita all were awake and entertaining till morning Jogging time and then they went for Jogging. Care, love, concern and friendship, Bonding I got from my friends is very precious to me.
It’s not just a place for academics but also a space where students learn invaluable life principles and form lasting connections. I always tell such kind of stories to my kids; they are always excited to hear my experience at Navodaya. I am happy, proud and always thankful to be part Navodaya family.
Name : Smt. Tejaswini Hiremath (Kambalimath)
Batch and Year of stay: 11th Batch From 1996 to 2002
Current Occupation: Assistant Comptroller (FINANCE), University of Horticultural Sciences, Bagalkot
Current Location: Bagalkot
By - Pranesh Ashrit, Batch 3
Bathing was Struggle as well as Fun: We used to take bath at around 6 taps installed at various spots of open campus and were sleeping in newly constructed ( unused bathroom buildings/ structures).
Literally speaking first 4-5 batches never used bathrooms or toilet rooms😄Three four open sumps were also there which were earlier meant for storage of water to be used for construction of big buildings. One at MP hall, one at academic block entrance ( small gate), third one at boys dormitory , fourth at teachers quarters which was near to Principal house. We used to take bath at these open sumps which were seeming to be small swimming pools with around 4ft depth of water.
Sometimes late and lazy boys were taking bath at taps which were near to school admin block and mp hall. As these taps were considered as oasis0( being the last points of water supply) even if borewell was put off, these taps were running with water. Fun is that, by the time scheduled time, girls used to come to school with uniforms and books and these boys were seen only with wet briefs on their wet bodies
Washing clothes: We used to schedule our washing clothes at late nights of Saturday. And would mostly be missing Sunday breakfast.
TV & Entertainment: Only one TV of around 20 inch width was the source of entertainment. Around 200 students used to watch same program in that single TV with real enjoyment. Two Video cassettes per week were played by hiring a VCD player. It was learnt that to avoid complaints of huge stone quarrying, that Gandhi company gifted a new colour TV to JNV. During cricket matches, a radio was put on the head of TV for Audio Video effect🤣🤣. We preferred to listen to radio commentary rather than watching cricket in TV.
First Batch Problems: Due to accommodation crunch after arrival of 4th batch, 1st batch boys were shifted to present Own building. They used to come to APMC building every morning by running with school uniforms ( not sports dress) and return to Gudneppana Math new building after taking dinner at night..it prevailed almost up to six months!!
Special Dog Operation: A typical PGT Civics teacher by name Murugan was in-charge of the 1st batch boys. He was from Tamil Nadu. He always wore black pant and pure white shirt with a sharp mended red Nataraj pencil and A black ink pen ( red ink) in his pocket . Once he conducted a drive!!
As the school mess was always with preparation of food for around 280 members and three times a day, the no. of street dogs got doubled within no time and were seen everywhere in the campus. Un fortunately all dogs got some skin disease and were looking absurd and created some fear in the minds of students. One Sunday, Murugan sir announced that all dogs will be either sent out permanently from campus or they should be killed!!! Within next 3-4 hours, around 7-8 dogs were killed..
Remember, there was no compound at that time. And think of running around 20-25 acres chasing the dogs...
Bomb scare & the brave Dattatri Sir: Once, a phone call received at school phone that a bomb was kept in the campus!! Imagine how we felt and even teachers who came from distant places were reacting to it.
One teacher by name Dattatri sir (geography) and the other Nagaraj sir ( SUPW ) were dare enough to guard the whole campus ( which was without compound) by moving on their Rajdoot bike for full 8 hours of night. Hats off to them!!
Scary cardboard nights: Even earlier to this ( probably during 1988), when we're accommodated in APMC godown, five separate🎉 rooms were structured/ designed with cardboard partitions. Some strange people came at night and jumped over the sleeping students and shouted slogans S.F.I. jindabad... Whole night we kept blinking our eyes innocently...
Shiny Shoes: In the morning before the breakfast, there was an unofficial competition among all of us to polish our black leather shoes and we used to keep the polished shoes against rising Sun to check whether they are shining or not...😄😄
Eating on floor: For food, we used sit on floor only. House on duty students used to arrange hundreds of plates, glasses and curd cups in a systematic manner, till then we used to wait outside burning our stomach..
Helpful Akka's: Senior girls / Akka used to ask our new uniforms!! The purpose was they will stitch our initials on these uniforms so that we can identify our clothes easily in the mass washing contest😄😄😄
Hawaii treasures: One more place we used to carve our initials was on our hawai chappals provided by JNV. All 300 pairs were same. So we used to design these chappals for quick identification...😄😄
Navodaya is great: I remember, For first three vacations after our admission, we were even paid with Bus charge ( Kuknoor to our hometown)..
Memorable Picture: 1990 photo.. Boys from 3rd, 4th and 5th batches. Green house meeting on Sunday under Tamarind tree 🌲🌲
By - Dr. Kaveri Shavi, Batch 3
ಇಂದಿಗೆ 36 ವಸಂತಗಳು ಗತಿಸಿವೆ.
11 ವಸಂತಗಳನ್ನು ಕಂಡಿದ್ದ ಬಡ ಕುಟುಂಬದ ಒಬ್ಬ ಹುಡುಗಿ, ಮನೆಯಲ್ಲಿ ಕಿತ್ತು ತಿನ್ನುವ ಬಡತನ.
ಪಕ್ಕದ ತಾಲ್ಲೂಕು ಕೇಂದ್ರಕ್ಕೆ ಪರೀಕ್ಷೆಗೆ ತೆರಳಲು ಹಣದ ಅಭಾವ, ಜೊತೆಗೆ "ಸಾವಿರಾರು ಮಕ್ಕಳು ಪರೀಕ್ಷೆ ಬರೀತಾರ, ಅದರಾಗ ನೀನೇನ್ ಪಾಸ್ ಆಗ್ತಿದಿ? ಅದಕ್ಕ ಇಷ್ಟ ರೊಕ್ಕ ಕೊಟ್ಟು ಪಕ್ಕದ ಪಟ್ಟಣಕ್ಕ ಹೋಗಿ ಬರಬೇಕು.. ಎಲ್ಲ waste, ಬ್ಯಾಡ ಬಿಡು ". ಅಂತ ಗೊಣಗಿದ ಸಂಭಂದಿಕರು.
Fees ತಗೋಲ್ದೇನೆ tution ಹೇಳಿದ್ದ ಬಾಲ ವೀರಪ್ಪ ಮೇಷ್ಟ್ರು, ತಮ್ಮ ಸ್ವಂತ ಖರ್ಚಿನಲ್ಲಿ ನನ್ನನ್ನು & ಮತ್ತು ಇನ್ನುಳಿದ ನನ್ನ ಸಹಪಾಠಿ ಗಳನ್ನು (ರಾಜಕಮಲ ಸೇರಿದಂತೆ ) ಕುಷ್ಟಗಿ ಪಟ್ಟಣಕ್ಕೆ ಕೆರೆದೋಯ್ದು, ಅವ್ರೆ ಎಕ್ಸಾಮ್ ಸೆಂಟರ್ನಲ್ಲಿ ನಮ್ಮ ಹಾಲ್ಟಿಕೆಟ್ ನಂಬರ್ ಹೊಂದುವ ಆಸನದಲ್ಲಿ ಕುಳ್ಳಿರಿಸಿ, "ಛಲೋತ್ತಾಗಿ, ನಿನಗ ಗೊತ್ತಿರೋದನ್ನ ಬರಿ. ನೀನು ಪಾಸ್ ಆಗೇ ಆಗತೀಯ." ಅಂತ ನನ್ನ ನನ್ನ ತಲಿ ಮ್ಯಾಲ್ ಕೈ ಸವರಿ ಅಪರಿಚಿತರೇ ತುಂಬಿದ್ದ ಹಾಲ್ ನಲ್ಲಿ ಬಿಟ್ಟು ಹೋಗಿದ್ದರು.
ಪರೀಕ್ಷೆ ಮುಗಿಸಿ ಹೊರಬಂದೊಡನೆಯೇ ಅದೇ ಪ್ರೀತಿ, ಕಕ್ಕುಲಾತಿ, ಭರವಸೆಗಳಿಂದ ತುಂಬಿದ್ದ ನನ್ನ ಮೇಷ್ಟ್ರು ಕಣ್ಣುಗಳು "ಪರೀಕ್ಷೆ ಛಲೋ ಬರಿದಿಯಲ್ಲ?" ಅಂತ ಕೇಳಿದ್ದವು.
ನಾನೂ ಕೂಡ ಕಣ್ಣ ಸನ್ನೆಯಲ್ಲೇ ಭಯದಿಂದ ತಲೆಯಾಡಿಸಿದ್ದೆ.
ಅಲ್ಲಿಂದ ನನ್ನ ಮೇಷ್ಟ್ರು ನಮಲ್ಲರನ್ನ ಒಂದು ಹೋಟೆಲ್ ಗೆ ಕರೆದೋಯ್ದರು....
ಎಲ್ಲರಿಗೂ ಬೇಕಾದ ತಿಂಡಿ ಕೊಡಿಸಿದರು... ಯಾವತ್ತೂ ಹೋಟೆಲ್ ಮುಖ ನೋಡಿರದ ನನಗೆ ಅಲ್ಲಿ ಏನು ಕೇಳೋದು ಅಂತ ತಿಳಿಲಿಲ್ಲ. ಮೇಷ್ಟ್ರೇ ನನಗೆ ಮಸಾಲೆ ದೋಸೆ ಕೊಡಿಸಿದ್ರು. ನನ್ನ ಜೀವನದಲ್ಲಿ ನಾನು ಸವಿದ ಮೊದಲ ಮಸಾಲೆ ದೋಸೆ ಅದಾಗಿತ್ತು...
ಮಸಾಲೆ ದೋಸೆ ಸವಿಯ ಗುಂಗಿನಿಂದ ಹೊರಬರುವ ಹೊತ್ತಿಗೆ ನಾನಿದ್ದ ಬಸ್ಸು ನನ್ನ ಊರ ನಿಲ್ದಾಣದಲ್ಲಿತ್ತು....
ಸರಸರನೇ ಇಳಿದು ಮನೆಗೆ ನಡೆದಿದ್ದೆ....... ಆ ದಿನ ಆ ದೇವತಾಪುರುಷ,ನನ್ನ ಮೇಷ್ಟ್ರು ನನ್ನ ಬಿಟ್ಟಿದ್ದರೆ?......
ಮುಂದೆ ನಡೆದಾದ್ದೆಲ್ಲ ಈಗ ಇತಿಹಾಸ....ಕಣ್ಣಾಲೆ ಅಂಚಿನಲ್ಲಿ
By - Pranesh Ashrit, Batch 3
I came from Sirwar to Manvi. I was very much afraid and worried by seeing the number of students standing at school entrance, here and there. I was not even 1% confident about passing the Navodaya exam. But I remember my english teacher Sri ಭೀಮಣ್ಣ ಮಾಸ್ಟರ್ Sirwar for training up me..🙏
There were two more classmates along with me and my father took all of us to Brindavan Hotel for a rare delicious dosa 😋😋 after the exam.
And when result came. My father was admitted in govt hospital due to a minor accident. (An ambassador car hit his Luna ). And my selection news came all the way from Kuknoor to Raichur through the mouths of several people.
Later you all know..
We received an ordinary post from post office.
One single A4 size cyclostyled paper in Kannada, stating the 🎉 news of being selected and instructed us to bring six items...
ಒಂದು ಟ್ರಂಕು,
ಒಂದು ಬ್ಯಾಟರಿ,
ಹಾಸಿಗೆ ಹೊದಿಕೆ,
ಬ್ರಷ್ ಪೇಸ್ಟ್😄😄
ಬಕೆಟ್, ತಂಬಿಗೆ
And it asked us to report to Kuknoor (from 16-9-1988 to 18-9-1988)
We all innocently came with our elders..
and joined JNVK.😊😊
By - Shivanand, Batch 27
ಕಂಡಿರಲಿಲ್ಲ ನಾ ಸ್ವರ್ಗವ ಹಿಂದೆಂದೂ,
ಅದು ಸ್ವರ್ಗವೇ ನಾ ಕಂಡಿದ್ದು ಅಂದು,
ಮೊದಮೊದಲು ಆ ಸ್ವರ್ಗವೇ ನಮ್ಮ ಪಾಲಿಗೆ ನರಕ,
ಆ ನರಕದಲ್ಲಿ ನಾವೆ ಬರೆದುಕೊಂಡೆವು ನಮ್ಮದಲ್ಲದ ಜಾತಕ.......
ಮಂಜಿನ ಮುಂಜಾನೆಯಲಿ ಕಾಣುತ್ತಿದ್ದ ಕನಸು,
PT ಸರ್ ಬಂದೊಡನೆಯೇ ಹಾರಿಹೊಗುತಿತ್ತು,
MORNING EXERCISE ನಂತರ ಮಲಗುವ ಆ 15 ನಿಮಿಷದಲ್ಲಿತ್ತು ಸ್ವರ್ಗ......
ಹಾರಾಡಿ ತೇಲಾಡಿ TEA ಕುಡಿಯಲು ಓಡಿ ಹೋದರೆ,
TEA ನಮಗಾಗಿ ಕಾಯದೆ ಖಾಲಿಯಾಗುತ್ತಿತ್ತು,
ಇರೋದನ್ನ ಕುಡಿದು ASSEMBLY ATTEND ಮಾಡಿದಾಗ ಕಾಣುತ್ತಿತ್ತು ಸ್ವರ್ಗ......
ಅತ್ತ ಪಾಠ ಶುರುವಾಗುತ್ತಿತ್ತು,
ನಾವು ಕೇಳುತ್ತಿದ್ದೇವು,
ಆದರೆ ನೆನಪಂತು ಇರುತ್ತಿರಲಿಲ್ಲ,
ಖಾಲಿ ತಲೆಯಲ್ಲಿ EXAM HALL ಹೋಗಿ, PAPER ಬರೆಯುವಾಗ ಕಾಣುತ್ತಿತ್ತು ಸ್ವರ್ಗ........
ಆ ಕಿತ್ತಾಟ, ಆ ಹೊಡೆದಾಟ, ಆ ತುಂಟಾಟ
ಸ್ವರ್ಗವೇ ನಿಜ, ಆದರೆ ಅದು ಇಂದು ಕನಸು ಮಾತ್ರ.....
ಬಂಧುಗಳಲ್ಲದ ಆ ಬಂಧಗಳು,
ಹಿಂದೆಂದೂ ಕಾಣದ ಮನಸ್ಸುಗಳು,
ಮನಸ್ಸಿಗೆ ಕಾಣುವ ಆ ಮುಖಗಳು....
"2nd SATURDAY"
ತಿಂಗಳಿಂದ ಕಾಯುತ್ತಿದ್ದ ಆ ದಿನ,
ಕಾದ ದಿನ ಬಂದಾಗ ಆ ದಿನವೇ ವರ್ಷವಾಗುತ್ತಿತ್ತು.....
ನಾಲ್ಕು ಗೋಡೆಗಳ ಒಳಗಿದ್ದ ನಮಗೆ,
ಗೋಡೆ ಹಾರಿದಾಗ ಕಾಣುತ್ತಿತ್ತು ಸ್ವರ್ಗ.....
ಕದ್ದು ತಿನ್ನುತ್ತಿದ್ದ ಆ ಗುಂಪಿನಲ್ಲಿ ಕಾಣುತ್ತಿತ್ತು ಸ್ವರ್ಗ......
ಏಳು ಜನ್ಮ ಕಳೆದರೂ ಸಿಗದ ನೆನಪುಗಳು,
ಆ ಏಳು ವರ್ಷದಲ್ಲೇ ಸಿಕ್ಕಿತು......
ಒಳಗೆ ಕಾಲಿಡುವಾಗ ಇದ್ದ ನರಕ,
ಹೊರಗೆ ಕಾಲಿಡುವಾಗ ಸ್ವರ್ಗ........
ಆ ದಿನ ಮತ್ತೆ ಬಾರದು,
ಕಂಡಿರಲಿಲ್ಲ ನಾ ಸ್ವರ್ಗವ ಹಿಂದೆಂದೂ,
ಅದು ಸ್ವರ್ಗವೇ ನಾ ಕಂಡಿದ್ದು ಅಂದು,
ಆ ಸ್ವರ್ಗದಲ್ಲಿ ನಾವೆ ಬರೆದುಕೊಂಡೆವು ನಮ್ಮದಲ್ಲದ ಜಾತಕ......
By - Chennaveera, Batch 18
ಅದು 2004 ನೇ ಇಸವಿ, ನಾನು ನನ್ನ ಗೆಳೆಯರೊ ಂದಿಗೆ ಚಿನ್ನಿ ದಾಂಡು ಆಡ್ತಾ ಇದ್ದೆ. ಆ ಸಮಯದಲ್ಲಿ ನಮ್ಮ ಊರಿನ ಪೋ ಸ್ಟ್ ಮ್ಯಾ ನ್ ಬಸಪ್ಪ ನವರು ಹತ್ತಿರಕ್ಕೆ ಬಂದು " ಹೇ , ಅಪ್ಪಿ ಜಾಲ್ಸಾ (ಮಿಠಾಯಿ ) ಕೊ ಡ್ಬೇಕು ನೋ ಡು ಅಂದ್ರು , ನಂಗಿನ್ನೂ ಅವಾಗ ಜಲ್ಸಾ ಅಂದ್ರೇನು ಅಂತ ಗೊ ತ್ತಿರ್ಲಿ ಲ್ಲ. ...
By - Kiran Kumar D, Batch 31
ಓ ನೀ ಮೌನೀಯಕೆ...
ಮನದ ನೋವಿನಲಿ ಆಳುವಾಸೆ ನನಗೆ
ಕಣ್ಣೀರು ನೀ ಬರುತಿಲ್ಲ ಹೊರಗೆ
ಉತ್ತರ ಸಿಕ್ಕಿಲ್ಲ ನಾನು ಕೇಳಿದ ಪ್ರಶ್ನೆಗೆ
ಮೌನವೆ ನೀ ಯಾಕೆ ಕೂಡಿಟ್ಟಿರುವೆ ಒಳಗೆ/೧/
ಮನದೊಳಗೆ ಸೂರಿಯುತಿದೆ ಮಳೆಯಾಗಿ ಕಣ್ಣೀರು ಮಾತನಾಡದೆ ಕಣ್ಣು ಚೆಲ್ಲುತಿಲ್ಲ ಹನಿ ನೀರು
ಒ ಹೃದಯ ಹೇಳು ನೀ ನಂಗೆ ನನ್ನವರಾರು
ನೀ ಮೌನಿಯಾದರೆ ನಾನಗುವೇ ಚೂರು ಚೂರು/೨/
ಕಲಿಯಬೇಕು ನಾ ಎಲ್ಲ ಬಿಟ್ಟು ಜೀವಿಸಲು ನನಗಾಗಿ
ಜೊತೆ ನಿಲ್ಲಬೇಕು ನಾ ನನ್ನ ಪ್ರೀತಿಸುವವರಿಗಾಗಿ
ಅತ್ತುಬಿಡು ಮನವೇ ನೀ ಈ ನೋವಿಂದ ದೂರವಾಗಿ
ನಗುತಿರು ನೀನು ಈ ಜಗದಲಿ ಪುಟ್ಟ ಮಗುವಾಗಿ/೩/
ಕಳೆದ ಕ್ಷಣಗಳೆನೆಲ್ಲ ಮರೆತಿಬಿಡು
ಮೆಲ್ಲಗೆ ಮೌನಿಯಾಗಿ ಮುಂದೆ ಹೆಜ್ಜೆಯಿಡು
ನಿನ್ನೊಡನೆ ಬಂದವರ ಜೊತೆ ನಿಲುವಾಗಿ ನಿಂತುಬಿಡು
ಹೋದವರ ಚಿಂತೆ ಬಿಟ್ಟು ಸಂಚಾರಿಯಾಗಿಬಿಡು/೪/
-ಕೆ.ಡಿ ಕವನಗಳು
ಮನುಕುಲದ ಮಹಾಯೋಗಿ..
ಕೈ ಕೆಸರು ಮಾಡಿಕೊಳ್ಳುವ ಭುವಿಗೆ ಭಾಗಿ
ತಾನು ದಣಿದು ಅನ್ನ ಬೆಳೆಯೋ ತ್ಯಾಗಿ
ಅಸಿದವರ ಹೊಟ್ಟೆ ತುಂಬಿಸೊ ಯೋಗಿ
ದೇಶಕ್ಕೆ ದಾನ ಮಾಡೋ ನೆಗಿಲಯೋಗಿ
ಹಗಳಿಲಿರುಳು ಬೆವರ ಸುರಿಸುವ
ಮಳೆಗಾಗಿ ಭಾನ ನೋಡುವ
ಹನಿಗಾಗಿ ದೇವರ ಬೇಡುವ
ಭುವಿಯೆಲ್ಲಾ ಹಸಿರು ಮಾಡುವ
ಅವಗ್ಯಾಕೆ ನೀ ಮೋಸ ಮಾಡುವೆ
ಬಡವನೆಂದು ಭೇಧ ತೋರುವೆ
ಅಜ್ಞಾನಿಯೆಂದು ದೂರ ದೂಡುವೆ
ಮುಗ್ದನೆಂದು ಅನ್ಯಾಯ ಮಾಡುವೆ
ಅವನಿಲ್ಲವಾದರೆ ನೀ ನಶಿಸಿ ಹೋಗುತಿ
ಅವನೆ ಜಗತ್ ಬೆಳಕಿಸೊ ಕಾಂತಿ
ನೀನಾಗಿಡಿದಿದೆ ಅಹಂಕಾರದ ಭ್ರಾಂತಿ
ಅವ ಸಿಡಿದೆದ್ದರೆ ಶುರುವಾಗುವುದು ಕ್ರಾಂತಿ
ಹಸಿದವಗೆ ಅನ್ನ ನೀಡೋ ಅನ್ನದಾತ
ದೇಶಕ್ಕೆ ಬೆನ್ನು ನೀಡೋ ದೇವದೂತ
ಭುವಿಗೆ ಹುಸಿರು ಕೊಟ್ಟ ಪ್ರಾಣದಾತ
ಅವನೇ ಮನುಕುಲದ ಮಹಾಯೋಗಿ ರೈತ
ಕೆ. ಡಿ. ಕವನಗಳು